Job Description: * ಇತ್ತೀಚಿಗೆ ಭಾರತದಿಂದ ಜಪಾನ್‌ಗೆ ಪ್ರಯಾಣಿಸಲು ಇನ್ನಷ್ಟು ಸುಲಭವಾಗುವ ನಿಟ್ಟಿನಲ್ಲಿ ಭಾರತ್ ಬಯೋಟೆಕ್ ಸಿದ್ದಪಡಿಸಿರುವ ಭಾರತದ ಕೋವಿಡ್-19 ಲಸಿಕೆ COVAXIN ನನ್ನು ಜಪಾನ್ ದೇಶವು ಗುರುತಿಸಿದೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಮಾಹಿತಿ ನೀಡಿದೆ. * 'ಜಪಾನ್ ಸರ್ಕಾರವು ಭಾರತ್ ಬಯೋಟೆಕ್ ಆಫ್ ಇಂಡಿಯಾ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆ COVAXIN ನ್ನು ಇದೇ 2022 ಏಪ್ರಿಲ್. 10 ರಿಂದ ಜಾರಿಗೆ ಬರುವಂತೆ ಜಪಾನ್ ದೇಶದಲ್ಲಿ ಮಾನ್ಯತೆ ಪಡೆದ ಲಸಿಕೆಗಳಲ್ಲಿ ಇದು ಒಂದಾಗಿದೆ. * ಗಮನಾರ್ಹವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನಿನ ಸಹವರ್ತಿ ಫ್ಯೂಮಿಯೊ ಕಿಶಿಡಾ ಅವರು 2022 ರ ಮಾರ್ಚ್ ಹಾಗೂ 2021 ರ ಸೆಪ್ಟೆಂಬರ್ ನಲ್ಲಿ ಕ್ವಾಡ್ ನಾಯಕರ ಶೃಂಗಸಭೆಗಳನ್ನು ಸ್ವಾಗತಿಸಿದ್ದರು ಹಾಗೂ ಕ್ವಾಡ್‌ನ ಧನಾತ್ಮಕ ಹಾಗೂ ರಚನಾತ್ಮಕ ಕಾರ್ಯಗಳಲ್ಲಿ ಸೈಬರ್ ಭದ್ರತೆ, ಬಾಹ್ಯಾಕಾಶ ಹಾಗೂ ಶಿಕ್ಷಣ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಸ್ಪಷ್ಟವಾದ ಫಲಿತಾಂಶಗಳನ್ನು ಒದಗಿಸುವದನ್ನು ನವೀಕರಿಸಿದ್ದಾರೆ. * ಉಭಯ ನಾಯಕರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಈ ಉಭಯ ದೇಶಗಳ ನಡುವಿನ ಸಹಯೋಗದ ಯೋಜನೆಗಳ ಪ್ರಾಮುಖ್ಯತೆಯ ಬಗ್ಗೆ ಆಸಿಯಾನ್, ಪೆಸಿಫಿಕ್ ದ್ವೀಪ ರಾಷ್ಟ್ರಗಳ ಯೋಜನೆಗಳ ವಿಸ್ತರಣೆಯನ್ನು ಮಾಡುವದನ್ನು ಕಾಯುತ್ತಿದೆ. * COVAXIN ಭಾರತ್ ಬಯೋಟೆಕ್‌ನಿಂದ ಭಾರತದ ಸ್ಥಳೀಯ COVID-19 ಲಸಿಕೆಯನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಲಸಿಕೆಯನ್ನು ಹೋಲ್-ವಿರಿಯನ್ ನಿಷ್ಕ್ರಿಯಗೊಳಿಸಿದ ವೆರೋ ಸೆಲ್ ಪಡೆದ ಪ್ಲಾಟ್‌ಫಾರ್ಮ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗಿದೆ. * ಇಲ್ಲಿಯವರೆಗೆ 300 ಮಿಲಿಯನ್ ಡೋಸ್ ಸರಬರಾಜುಗಳ ಸುರಕ್ಷಿತ ದಾಖಲೆಯನ್ನು ಹೊಂದಿವೆ.