Job Description: * ಇತ್ತೀಚಿಗೆ ಕೇಂದ್ರ ಆರೋಗ್ಯ ಸಚಿವಾಲಯ ಏಪ್ರಿಲ್. 10 ರಿಂದ ಖಾಸಗೀ ಕೋವಿಡ್-19 ಲಸಿಕಾ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೂ ಬೂಸ್ಟರ್ ಡೋಸ್ ನೀಡುವುದಾಗಿ ಘೋಷಣೆ ಮಾಡಿದೆ. ಇದೀಗ ಸೀರಂ ಇನ್ಟಿಟ್ಯೂಟ್ ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ ಲಸಿಕೆಗೆ ರೂ.600 ರ ದರ ನಿಗದಿ ಪಡಿಸಿದೆ. * ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ CEO ಆದರ್ ಪೂನಾವಾಲಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋವಿಶೀಲ್ಡ್ ಬೂಸ್ಟರ್ ಡೋಸ್ ಗಳು 600 ಕ್ಕೆ ಲಭ್ಯವಾಗಲಿವೆ ಎಂದಿದ್ದಾರೆ. * ಕೋವಿಶೀಲ್ಡ್ 'ಮುಂಜಾಗ್ರತಾ' ಡೋಸ್ ಗಳ ಬೆಲೆಯು 600 ಪ್ಲಸ್ ತೆರಿಗೆ, ಅನುಮೋದನೆ ಪಡೆದುಕೊಂಡ ಬಳಿಕ ತೆರಿಗೆ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.