Job Description: * ಭಾರತದ ಸ್ಪೇಸ್‍ಟೆಕ್ ಸ್ಟಾರ್ಟ್ ಅಪ್ ಆಗಿರುವ ಪಿಕ್ಸೆಲ್ ತನ್ನ ಪ್ರಥಮ ವಾಣಿಜ್ಯ ಉಪಗ್ರಹವಾಗಿರುವ ʼಶಕುಂತಲಾ'ನ್ನು ಉಡಾಯಿಸಲಾಗಿದೆ. ಈ ಉಪಗ್ರಹವು ಪೂರ್ಣ-ಪ್ರಮಾಣದ ವಾಣಿಜ್ಯ ಉಪಗ್ರಹವಾಗಿದೆ. ಏಲಾನ್ ಮಸ್ಕ್ ಅವರ ಸ್ಪೇಸ್‍ಎಕ್ಸ್'ನ ಫಾಲ್ಕನ್-9 ರಾಕೆಟ್‍ನ ಮೂಲಕ ಇದನ್ನು ಉಡಾವಣೆ ಮಾಡಲಾಗಿದೆ. * ಈ ಉಪಗ್ರಹದ ನಿರ್ಮಾಣವನ್ನು ಕರ್ನಾಟಕ ಮೂಲದ ಆವೇಶ್‌ ಅಹ್ಮದ್‌ ಎನ್ನುವವರು ನಿರ್ಮಿಸಿದ್ದಾರೆ. ಈವರೆಗೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿರುವ ಉಪಗ್ರಹಗಳಲ್ಲಿಯೇ ಅತ್ಯಂತ ಉನ್ನತ ರಿಸೊಲ್ಯೂಶನ್ ಒಳಗೊಂಡಿರುವ ಹೈಪರ್ ಸ್ಪೆಕ್ಟ್ರಲ್ ಕಮರ್ಷಿಯಲ್ ಕ್ಯಾಮೆರಾಗಳನ್ನು ಈ ಉಪಗ್ರಹದಲ್ಲಿ ಅಳವಡಿಸಲಾಗಿದೆ. * ಇತ್ತೀಚಿಗೆ ಈ ಉಪಗ್ರಹವನ್ನು ಅಮೆರಿಕಾದ ಕೇಪೆ ಕೆನವರೆಲ್‍ನಿಂದ ಸ್ಪೇಸ್‍ ಎಕ್ಸ್'ನ ಟ್ರಾನ್ಸ್‍ಪೋರ್ಟರ್-4 ಮಿಷನ್ ನ ಮೂಲಕ ಉಡಾವಣೆ ಮಾಡಲಾಗಿದೆ. * ಈ ಹಿಂದೆ 2017 ರಲ್ಲಿ ತಮ್ಮ ಸ್ಟಾರ್ಟ್-ಅಪ್ ಸ್ಪೇಸ್‍ಎಕ್ಸ್‍ನ ಹೈಪರ್‍ಲೂಪ್ ಪಾಡ್ ಸ್ಪರ್ಧೆಯ ಹಲವು ಫೈನಲಿಸ್ಟ್‍ಗಳಲ್ಲಿ ಒಂದಾಗಿತ್ತು ಇದೀಗ ಸ್ಪೇಸ್‍ಎಕ್ಸ್‍ನ 4 ನೇ ರೈಡ್‍ಶೇರ್ ಮಿಷನ್ ಭಾಗವಾಗಿ ಉಪಗ್ರಹದ ಉಡಾವಣೆ ಮಾಡಲಾಗಿದೆ ಹಾಗೂ ಇದು ಬಹಳ ದೂರ ಸಾಗಿದೆ ಎಂದು ವರದಿ ಮಾಡಿದ್ದಾರೆ. * ಕರ್ನಾಟಕದ ಆಲ್ದೂರಿನ ನದೀಮ್‌ ಅಹ್ಮದ್‌ ರವರ ಪುತ್ರನಾಗಿರುವ ಆವೇಶ್ ಅಹ್ಮದ್‌ ಅವರು ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ನಂತರ ಪಿಕ್ಸೆಲ್‌ ಏರೋಸ್ಪೇಸ್‌ ಕಂಪೆನಿಯನ್ನು ಆರಂಭಿಸಿದ್ದರು. ಇದೀಗ ಶಕುಂತಲಾ ಉಪಗ್ರಹವನ್ನು ಉಡಾವಣೆ ಮಾಡಿದ್ದಾರೆ. ಮತ್ತೇ ಇವರು ಆನಂದ್‌ ಉಪಗ್ರಹವನ್ನು ಉಡಾವಣೆ ಮಾಡುವದಾಗಿ ತಮ್ಮ ಆಶಯವನ್ನು ಹೊರಹಾಕಿದ್ದಾರೆ. * ಶಕುಂತಲಾ ಉಪಗ್ರಹವು 15 KG ಗಿಂತಲೂ ಕಡಿಮೆ ತೂಕವನ್ನು ಹೊಂದಿದೆ, ಬಾಹ್ಯಾಕಾಶದ ಚಿತ್ರಗಳನ್ನು 150 ಕ್ಕೂ ಅಧಿಕ ಬಣ್ಣಗಳ ಬ್ಯಾಂಡ್‍ಗಳಲ್ಲಿ ಸೆರೆ ಹಿಡಿಯವ ಸಾಮರ್ಥ್ಯ ಹಾಗೂ ತಲಾ ಪಿಕ್ಸೆಲ್‍ಗೆ 10 ಮೀ. ರಿಸೊಲ್ಯೂಷನ್ ಹೊಂದಿದೆ. ಈ ಉಪಗ್ರಹದ ಮೂಲಕ ಕಣ್ಣಿಗೆ ಕಾಣದ ಅನೇಕ ಸನ್ನಿವೇಶಗಳು ಉದಾಹರಣೆಗಾಗಿ ಅರಣ್ಯ ನಾಶ, ನೈಸರ್ಗಿಕ ಅನಿಲ ಸೋರಿಕೆಗಳು, ಮಾಲಿನ್ಯ, ಬೆಳೆಗಳ ಆರೋಗ್ಯ ಕ್ಷೀಣಿಸುವುದು ಮತ್ತು ಕರಗುತ್ತಿರುವ ಹಿಮಗಡ್ಡೆಗಳ ಚಿತ್ರಗಳನ್ನು ಸೆರೆಹಿಡಿಯಲಿದೆ ಎಂದು ತಿಳಿಸಿದ್ದಾರೆ.