Job Description: * ಇತ್ತೀಚಿಗೆ ಶ್ರೀಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಅವರು ಬಹುಮತವನ್ನು ಕಳೆದುಕೊಂಡಿದ್ದಾರೆ, ದ್ವೀಪ ರಾಷ್ಟ್ರ ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಹಿನ್ನಲೆಯಿಂದಾಗಿ ಅಲ್ಲಿನ 42 ಸಂಸದರು ತಮ್ಮ ಸಮ್ಮಿಶ್ರ ಸರ್ಕಾರವನ್ನು ತೊರೆದಿದ್ದಾರೆ. ಈ ಹಿನ್ನಲೆಯಿಂದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರ ಪಕ್ಷವು ಬಹುಮತ ಕಳೆದುಕೊಂಡಿದೆ. * ಇತ್ತೀಚಿಗೆ ಸರ್ಕಾರವನ್ನು ತೊರೆದಿರುವ 42 ಸಂಸದರ ಪೈಕಿ 14 ಮಂದಿ ಶ್ರೀಲಂಕಾ ಫ್ರೀಡಂ ಪಾರ್ಟಿ, 9 ಮಂದಿ ಶ್ರೀಲಂಕಾ ಫ್ರೀಡಂ ಪಾರ್ಟಿ, 9 ಮಂದಿ, ಹಾಗೂ ಸಿಲೋನ್ ವರ್ಕರ್ಸ್ ಕಾಂಗ್ರೆಸ್'ನ 02, ಆಲ್ ಸಿಲೋನ್ ಮಕ್ಕಳ್ ಕಾಂಗ್ರೆಸ್ ನ 02 ಹಾಗೂ ಸರ್ಕಾರದ ಹನ್ನೊಂದು ಘಟಕ ಪಕ್ಷಗಳಿಂದ 16 ಜನರು ಸೇರಿಕೊಂಡಿದ್ದಾರೆ. * ಈ ಹಿಂದೆ 2020 ರ ಸಾರ್ವತ್ರಿಕ ಚುನಾವಣೆಯಲ್ಲಿ 225 ಸದಸ್ಯರ ಸಂಸತ್ತಿನಲ್ಲಿ ಆಡಳಿತಾರೂಢ ಮೈತ್ರಿಕೂಟವು 146 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಪಡೆದುಕೊಂಡಿತ್ತು. ಇದೀಗ ಶ್ರೀಲಂಕಾ ರಾಷ್ಟ್ರವು ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಲ್ಲಿನ ನಾಗರಿಕರು ದೀರ್ಘಕಾಲದ ವಿದ್ಯುತ್ ಕಡಿತ ಹಾಗೂ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಆ ದೇಶದಲ್ಲಿ ವ್ಯಾಪಕವಾಗಿ ಪ್ರತಿಭಟನೆ ನಡೆಯುತ್ತಿದೆ. ಇದೆಲ್ಲದರ ನಡುವೆ ಅಲ್ಲಿನ ಸರ್ಕಾರವು ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲು ಹಾಗೂ ಕರ್ಫ್ಯೂ ವಿಧಿಸುವಂತ ಪರಿಸ್ಥಿತಿಯನ್ನು ಹೇರಿದೆ. * ಇದೀಗ ದ್ವೀಪ ರಾಷ್ಟ್ರದಲ್ಲಿ ಅಶಾಂತಿ ಉಂಟಾಗಿದೆ ಈ ಹಿನ್ನಲೆಯಲ್ಲಿ ಎಲ್ಲಾ 26 ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.