Job Description: * 2021-22 ರ ಹಣಕಾಸು ವರ್ಷದಲ್ಲಿ ಭಾರತದ ಸರಕು ರಫ್ತುವು ಇತ್ತೀಚಿಗೆ ಬಿಡುಗಡೆಯಾಗಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಪೆಟ್ರೋಲಿಯಂ ಉತ್ಪನ್ನಗಳು, ಇಂಜಿನಿಯರಿಂಗ್ ಸರಕುಗಳು, ರತ್ನ ಹಾಗೂ ಚಿನ್ನಾಭರಣಗಳು ಇದರ ಜೊತೆಗೆ ರಾಸಾಯನಿಕಗಳ ಹೆಚ್ಚಿನ ಸಾಗಣೆಯ ಮೇಲೆ USD 418 ಶತಕೋಟಿಗೆ ಏರಿಕೆ ಕಂಡಿದೆ. * 2022 ರ ಮಾರ್ಚ್ ನಲ್ಲಿ ಒಂದು ತಿಂಗಳಲ್ಲಿ ಹೊರಹೋಗುವ ಸಾಗಣೆಗಳು ಸಾರ್ವಕಾಲಿಕ ಗರಿಷ್ಠ USD 40 ಶತಕೋಟಿಯನ್ನು ಹಂತವನ್ನು ತಲುಪಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆ 2021 ರ ಮಾರ್ಚ್ ನಲ್ಲಿ ರಫ್ತು ಪ್ರಮಾಣವು USD 34 ಬಿಲಿಯನ್ ಆಗಿತ್ತು. * ಭಾರತದ ಸರಕು ರಫ್ತು ಈ ವರ್ಷದ ಮಾರ್ಚ್ 23 ರಂದು ಗೊತ್ತುಪಡಿಸಿದ USD 400 ಶತಕೋಟಿ ಗಡಿಯನ್ನು ದಾಟಿದೆ. ಆರೋಗ್ಯಕರ ಬೆಳವಣಿಗೆಗೆ ಕೊಡುಗೆ ನೀಡುವ ಪ್ರಮುಖ ರಫ್ತು ವಲಯಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್, ಚಿನ್ನಾಭರಣಗಳು, ರಾಸಾಯನಿಕಗಳು ಹಾಗೂ ಔಷಧೀಯ ವಸ್ತುಗಳು ಸೇರಿವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ US, UAE, ಚೀನಾ, ಬಾಂಗ್ಲಾದೇಶ ಹಾಗೂ ನೆದರ್ಲ್ಯಾಂಡ್ಸ್ ಈ ಅಗ್ರ '05' ದೇಶಗಳು ರಫ್ತು ತಾಣಗಳಾಗಿವೆ. ಇದೀಗ ಭಾರತವು ಸರಕು ರಫ್ತು ಗುರಿಯನ್ನು ಸಾಧಿಸುವಲ್ಲಿ ಯಶಸ್ಸ ಕಂಡಿದೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ, ಅಷ್ಟೇ ಅಲ್ಲದೇ ಇದೊಂದು ಭಾರತದ 'ಆತ್ಮನಿರ್ಭರ್ ಭಾರತ್' ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ತಿಳಿಸಿದ್ದಾರೆ.