Job Description: * 2022 ನೇ ಸಾಲಿನ ಪ್ರತಿಷ್ಟಿತ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ಪಡೆದುಕೊಂಡಿದ್ದಾರೆ. ಇದೀಗ ಇವರು 2 ನೇ ಬಾರಿಗೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಸಂಗೀತ ನಿರ್ದೇಶಕ 'ರಿಕಿ ಕೇಜ್' ಅವರು ಈ ಹಿಂದೆ "ವಿಂಡ್ಸ್ ಆಫ್ ಸಂಸಾರ" ಎನ್ನುವ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿ 'ಡಿವೈನ್ ಟೈಡ್ಸ್' ಎನ್ನುವ ಸಂಗೀತ ಆಲ್ಬಂಗೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * 2022 ನೇ ಸಾಲಿನ ಪ್ರತಿಷ್ಟಿತ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು ಈ ಬಾರಿ "ರಿಕಿ ಕೇಜ್" ಹಾಗೂ ಸಂಗೀತಗಾರ "ಸ್ಟುವರ್ಟ್ ಕೋಪ್ ಲೆಂಡ್" ಅವರೊಡನೆ ಹಂಚಿಕೊಂಡಿದ್ದಾರೆ. * ಈ ವರ್ಷ ಇಬ್ಬರು ಭಾರತೀಯರು ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ, ಒಬ್ಬರು ಭಾರತೀಯ ಮೂಲದ ಗಾಯಕಿ "ಫಾಲು ಶಾ" ಹಾಗೂ "ರಿಕಿ ಕೇಜ್" ಅವರು ಪಡೆದುಕೊಂಡಿದ್ದಾರೆ.