Job Description: * ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ರಾಸ್ ಟೇಲರ್ ಅವರು ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚಿಗೆ ನೆದರ್ಲೆಂಡ್ಸ್ ವಿರುದ್ಧ ನಡೆದಿರುವ ಏಕದಿನ ಕ್ರಿಕೆಟ್ ಪಂದ್ಯದ ಬಳಿಕ ಟೇಲರ್ ಅವರು ವಿದಾಯವನ್ನು ತಿಳಿಸಿದ್ದಾರೆ. * ರಾಸ್ ಟೇಲರ್ ಅವರನ್ನು ನ್ಯೂಜಿಲೆಂಡ್ ಕ್ರಿಕೆಟ್ ಮುಖ್ಯಸ್ಥ ಮಾರ್ಟಿನ್ ಸ್ನೇಡನ್ ಅವರು ಸನ್ಮಾನಿಸಿ ಗೌರವ ನೀಡುವದರೊಂದಿಗೆ ಬೀಳ್ಕೊಟ್ಟಿದ್ದಾರೆ. * ಈ ಹಿಂದೆ ರಾಸ್ ಟೇಲರ್ ಅವರು ಬಾಂಗ್ಲಾದೇಶ ವಿರುದ್ಧದ ಸರಣಿಯ ನಂತರ ಟೆಸ್ಟ್ ಕ್ರಿಕೆಟ್‌ಗೆ ಟೇಲರ್ ವಿದಾಯವನ್ನು ತಿಳಿಸಿದ್ದರು. ಈ ಹಿಂದೆ ಇವರು 2006 ರಿಂದ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರಾಗಿದ್ದರು. ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮತ್ತೇ 2015 ರಲ್ಲಿ ಇವರು ಪರ್ತ್‌ನಲ್ಲಿ 290 ರನ್‌ಗಳುನ್ನು ಕಲೆಹಾಕಿರುವದು ನ್ಯೂಜಿಲೆಂಡ್ ಪರವಾಗಿ ದಾಖಲಾಗಿರುವ ವೈಯಕ್ತಿಕ ಉತ್ತಮ ಸ್ಕೋರ್ ಆಗಿದೆ. * ರಾಸ್ ಟೇಲರ್ ಅವರು ಆಡಿರುವ ತಂಡಗಳು ನ್ಯೂಜಿಲೆಂಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪುಣೆ ವಾರಿಯರ್ಸ್, ಟ್ರೆಬಾಂಗೊ ನೈಟ್ ರೈಡರ್ಸ್, ಸೇಂಟ್ ಲೂಸಿಯಾ ಕಿಂಗ್ಸ್, ವಿಶ್ವ ಇಲೆವನ್. ಈ ಎಲ್ಲ ತಂಡಗಳಲ್ಲಿ ಆಟವಾಡಿದ್ದಾರೆ. * ರಾಸ್ ಟೇಲರ್ ಅವರು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಮತ್ತು ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಮಾಜಿ ನಾಯಕ. 2021 ರ ಅಂತ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. * ಇತ್ತೀಚಿಗೆ 2020 ರ ಫೆಬ್ರವರಿಯಲ್ಲಿ ಟೇಲರ್ ಅವರು ನ್ಯೂಜಿಲೆಂಡ್‌ಗಾಗಿ ತನ್ನ 100 ನೇ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಇವರು ಅಂತರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ 100 ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟಿಗ ಇವರಾಗಿದ್ದಾರೆ.