Job Description: * ಪ್ರಸ್ತುತ ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧದ ಸನ್ನಿವೇಶಗಳಿಂದ ಸರಕುಗಳ ಪೂರೈಕೆಯಲ್ಲಿ ತೊಂದರೆಗಳು ಉಂಟಾಗುತ್ತಿವೆ, ಇದರಿಂದಾಗಿ ಆರ್ಥಿಕ ಒತ್ತಡಗಳು ಹಾಗೂ ಬೆಲೆ ಏರಿಕೆ ಸಮಸ್ಯೆಗಳು ಉಂಟಾಗುತ್ತಿವೆ ಈ ಹಿನ್ನಲೆಯಿಂದಾಗಿ ಮುಂದಿನ ದಿನಗಳಲ್ಲಿ ಏಷ್ಯಾದ ಆರ್ಥಿಕತೆಯ ನಿಧಾನಗೊಳಿಸುತ್ತದೆ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ. * ಈ ವರ್ಷದಲ್ಲಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ನಿಧಾನಗತಿಯ ಬೆಳವಣಿಗೆ ಹಾಗೂ ಹೆಚ್ಚುತ್ತಿರುವ ಬೆಲೆಯಿಂದಾಗಿ ಅಗತ್ಯ ವಸ್ತು ಉತ್ಪನ್ನಗಳ ಕೊರತೆಯಿಂದಾಗಿ ಜನರ ಮೇಲೆ ಬೀಳುವ ಹೊರೆ ಬೀಳಲಿದೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಯನ್ನು 4% ಕ್ಕೆ ತಗ್ಗಿಸಲಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ 2021 ರಲ್ಲಿ 7.2% ಬೆಳವಣಿಗೆಯನ್ನು ಕಂಡಿದೆ. ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ ದೇಶವು ಶೇ.5% ವಾರ್ಷಿಕ ವೇಗದಲ್ಲಿ ವಿಸ್ತರಿಸುತ್ತದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. * ಸಾಂಕ್ರಾಮಿಕ ರೋಗದಿಂದಾಗಿ ಜನ ಸಾಮಾನ್ಯರಿಗೆ ಅಧಿಕ ಮಟ್ಟದ ಸಾಲದ ಹೊರೆ ಜೊತೆಗೆ ಸಂಕಷ್ಟವು ಎದುರಿಸುತ್ತಿರುವ ವ್ಯವಹಾರಗಳು ಹಾಗೂ ಸರ್ಕಾರಗಳಿಗೆ ಹೊರೆಯಾಗಿದೆ ಎಂದು ವರದಿ ಹೇಳಿದೆ. * ಇದೀಗ ಏಷ್ಯಾದ ಹೆಚ್ಚಿನ ದೇಶಗಳು ಸಾಂಕ್ರಾಮಿಕ ರೋಗದಿಂದ ಸುಧಾರಿಸಿಕೊಳ್ಳುವಲ್ಲಿ ಹಿಂದುಳಿದಿದೆ. ಮಲೇಷ್ಯಾದಂತಹ ದೇಶಗಳು ಕರೆನ್ಸಿಯ ಹೊರಹರಿವು ನೀತಿಗಳಿಂದ ಅನೇಕ ಸಮಸ್ಯೆಗಳನ್ನೂ ಅನುಭವಿಸುತ್ತಿದೆ. * ವಿಶ್ವ ಬ್ಯಾಂಕ್ ಒಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದೆ, ಬಂಡವಾಳ ಯೋಜನೆಗಳನ್ನು ಅನುಸರಿಸುವ ಉದ್ದೇಶಕ್ಕಾಗಿ ಕಡಿಮೆ ಹಾಗೂ ಮಧ್ಯಮ-ಆದಾಯದ ದೇಶಗಳ ಸರ್ಕಾರಗಳಿಗೆ ಸಾಲ ಒದಗಿಸುತ್ತದೆ. ವಿಶ್ವಬ್ಯಾಂಕ್ ಎಂಬುದು ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ (IBRD) ಮತ್ತು ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್ (IDA) ಗಳ ಸಾಮೂಹಿಕ ಹೆಸರಾಗಿದೆ. * ವಿಶ್ವ ಬ್ಯಾಂಕ್'ನ್ನು ಅಧ್ಯಕ್ಷರು ಹಾಗೂ 25 ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು 29 ವಿವಿಧ ಉಪಾಧ್ಯಕ್ಷರು ನಡೆಸುತ್ತಾರೆ. IBRD ಮತ್ತು IDA ಕ್ರಮವಾಗಿ 189 ಮತ್ತು 174 ಸದಸ್ಯ ರಾಷ್ಟ್ರಗಳನ್ನು ಹೊಂದಿವೆ. ಯುಎಸ್, ಜಪಾನ್, ಚೀನಾ, ಜರ್ಮನಿ ಮತ್ತು ಯುಕೆ ಅಧಿಕ ಮತದಾನದ ಶಕ್ತಿಯನ್ನು ಹೊಂದಿವೆ.