Job Description: * ಸಾಗರಮಾಲಾ ಮೂಲಕ ಬಂದರುಗಳು, ಹಡಗು ಹಾಗೂ ಜಲಮಾರ್ಗಗಳ ಸಚಿವಾಲಯವು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ 10 ಯೋಜನೆಗಳನ್ನು ಗೊತ್ತುಪಡಿಸಿದೆ. ಈ ಪೈಕಿ ಬಂದರು ಸಂಪರ್ಕ, ಬಂದರು ಆಧುನೀಕರಣ, ಬಂದರು-ನೇತೃತ್ವದ ಕೈಗಾರಿಕೀಕರಣ ಹಾಗೂ ಕರಾವಳಿ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸರಿ ಸುಮಾರು 1336 ಕೋಟಿ ರೂ.ಮೊತ್ತದ '10' ಯೋಜನೆಗಳು ಮಂಜೂರಾಗಿವೆ ಎನ್ನಲಾಗಿದೆ. * ಕಳೆದ '07' ವರ್ಷಗಳಲ್ಲಿ '07' ಯೋಜನೆಗಳನ್ನು ಒಟ್ಟಾರೆಯಾಗಿ 641 ಕೋಟಿ ರೂ. ವೆಚ್ಚ ದಲ್ಲಿ ಪೂರ್ಣ ಗೊಳಿಸಲಾಗಿದೆ. ಇದೀಗ ಸಾಗರಮಾಲಾ 7 ಯಶಸ್ವಿ ವರ್ಷಗಳನ್ನು ಪೂರೈಕೆ ಮಾಡಿದೆ ಎಂದು ಎನ್‌ಎಂಪಿಎ ಅಧ್ಯಕ್ಷ ಎ.ವಿ.ರಮಣ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. * ರಾಷ್ಟ್ರದಲ್ಲಿ ಬಂದರು-ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸುವದು ಬಂದರು, ಹಡಗು ಹಾಗೂ ಜಲಮಾರ್ಗಗಳ ಸಚಿವಾಲಯದ ಮುಖ್ಯ ಕಾರ್ಯಕ್ರಮವಾಗಿದೆ. ಪ್ರಸ್ತುತ ಸಾಗರಮಾಲಾ ಯಶಸ್ವಿಯಾಗಿ 7 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರವು ಈ ದಿನವನ್ನು ಆಚರಿಸುತ್ತಿದೆ ಎಂದು ರಮಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ಸಾಗರ್ಮಾಲಾ ಕಾರ್ಯಕ್ರಮ ದೇಶದ ಲಾಜಿಸ್ಟಿಕ್ಸ್ ವಲಯದ ಕಾರ್ಯಕ್ಷಮತೆಯನ್ನು ವೃದ್ಧಿಸುವಲ್ಲಿ ಭಾರತ ಸರ್ಕಾರದ ಒಂದು ಉಪಕ್ರಮವಾಗಿದೆ. ಇದೀಗ ಹೊಸ ಮೆಗಾ ಬಂದರುಗಳನ್ನು ಸ್ಥಾಪನೆ ಮಾಡಲು, ಭಾರತದ ಅಸ್ತಿತ್ವದಲ್ಲಿರುವ ಬಂದರುಗಳನ್ನು ಆಧುನೀಕರಿಸಲು, 14 ಕರಾವಳಿ ಆರ್ಥಿಕ ವಲಯಗಳನ್ನು ಹಾಗೂ ಕರಾವಳಿ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಸುಮಾರು 8.5 ಟ್ರಿಲಿಯನ್ ಹೂಡಿಕೆಯನ್ನು ಒಳಗೊಳ್ಳುತ್ತದೆ. ಹಾಗೆಯೇ ರಸ್ತೆ, ರೈಲು, ಬಹು-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಪೈಪ್‌ಲೈನ್‌ಗಳು ಹಾಗೂ ಜಲಮಾರ್ಗಗಳ ಮೂಲಕ ಬಂದರು ಸಂಪರ್ಕವನ್ನು ವೃದಿಸುವಲ್ಲಿ ಕರಾವಳಿ ಸಮುದಾಯದ ಅಭಿವೃದ್ಧಿಯನ್ನು ಉತ್ತೇಜಿಸಲಾಗುತ್ತದೆ ಎಂದಿದ್ದಾರೆ. * ಸಾಗರ್ಮಾಲಾ ಕಾರ್ಯಕ್ರಮವು ಭಾರತದಲ್ಲಿನ 7,517 ಕಿ.ಮೀ. ಉದ್ದದ ಕರಾವಳಿಯನ್ನು 14,500 ಕಿ.ಮೀ. ಸಂಭಾವ್ಯ ಜಲಮಾರ್ಗಗಳು ಹಾಗೂ ಪ್ರಮುಖ ಅಂತರರಾಷ್ಟ್ರೀಯ ಕಡಲ ವ್ಯಾಪಾರ ಮಾರ್ಗಗಳಲ್ಲಿ ತನ್ನ ಕಾರ್ಯತಂತ್ರದ ಸ್ಥಳವನ್ನು ಬಳಕೆ ಮಾಡುವ ಮೂಲಕ ದೇಶದಲ್ಲಿ ಬಂದರು-ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸುವದು ಶಿಪ್ಪಿಂಗ್ ಸಚಿವಾಲಯದ ಮುಖ್ಯ ಕಾರ್ಯಕ್ರಮವಾಗಿದೆ.