Job Description: * ಇತ್ತೀಚಿಗೆ ಫೋರ್ಬ್ಸ್ ವಾರ್ಷಿಕ ವಿಶ್ವದ ಬಿಲಿಯನೇರ್ ಪಟ್ಟಿ ಬಿಡುಗಡೆ ಯಾಗಿದೆ, ಅದರಲ್ಲಿ ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಕಂಪನಿ CEO ಎಲೋನ್ ಮಸ್ಕ್ ಅವರು ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಎಲೋನ್ ಮಸ್ಕ್ ಈ ವರ್ಷ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಅಗ್ರ ಸ್ಥಾನದಿಂದ ಹಿಂದೆ ಹಾಕಿದ್ದಾರೆ. * ಹಾಗೆಯೇ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಕೂಡ ವಿಶ್ವದ 10 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ, ಇದೀಗ ಇವರು ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನೊಬ್ಬ ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರು 11 ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪೈಕಿ ವಿಶ್ವದ ಶ್ರೀಮಂತ ಜನರ 36 ನೇ ವಾರ್ಷಿಕ ಶ್ರೇಯಾಂಕದಲ್ಲಿ 2,668 ಬಿಲಿಯನೇರ್‌ಗಳಿದ್ದಾರೆ. ಈ ವರ್ಷದ ಪಟ್ಟಿಯಲ್ಲಿ 87 ಉದ್ಯಮಿಗಳು ಹೊಸದಾಗಿ ಸೇರಿಕೊಂಡಿದ್ದಾರೆ. * ಒಟ್ಟಾರೆ 4.7 ಟ್ರಿಲಿಯನ್ ಮೌಲ್ಯದ 735 ಬಿಲಿಯನೇರ್‌ಗಳನ್ನು ಹೊಂದಿರುವ ಅಮೇರಿಕ ಅಗ್ರ ಸ್ಥಾನದಲ್ಲಿದೆ. ಆದರೆ ರಷ್ಯಾ ಹಾಗೂ ಚೀನಾ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿವೆ. * ಫೋರ್ಬ್ಸ್ ಇಂಟಿಗ್ರೇಟೆಡ್ ವೇಲ್ ಮೀಡಿಯಾ ಇನ್ವೆಸ್ಟ್‌ಮೆಂಟ್ಸ್ ಹಾಗೂ ಫೋರ್ಬ್ಸ್ ಕುಟುಂಬದ ಒಡೆತನದ ಅಮೇರಿಕನ್ ವ್ಯಾಪಾರ ನಿಯತಕಾಲಿಕವಾಗಿದೆ. ಈ ಸಂಸ್ಥೆಯು ವರ್ಷಕ್ಕೆ '08' ಬಾರಿ ಪ್ರಕಟಿಸಲಾಗುತ್ತದೆ, ಈ ಸಂಸ್ಥೆಯು ಹಣಕಾಸು, ಉದ್ಯಮ, ಹೂಡಿಕೆ ಹಾಗೂ ಮಾರುಕಟ್ಟೆ ವಿಷಯಗಳ ಕುರಿತು ಲೇಖನಗಳನ್ನು ಒಳಗೊಂಡಿರುತ್ತದೆ. ಫೋರ್ಬ್ಸ್ ಏಷ್ಯಾದಲ್ಲಿ ಅಂತರರಾಷ್ಟ್ರೀಯ ಆವೃತ್ತಿಯನ್ನು ಹೊಂದಿದೆ ಹಾಗೂ ಪ್ರಪಂಚದಾದ್ಯಂತ 27 ದೇಶಗಳು ಆವೃತ್ತಿಯನ್ನು ಒಳಗೊಂಡಿವೆ. * ಫೋರ್ಬ್ಸ್ "ಚೇಂಜ್ ದಿ ವರ್ಲ್ಡ್" ಎಂಬ ಧ್ಯೇಯವಾಕ್ಯವನ್ನು ಹೊಂದಿದೆ.