Job Description: * ಬಿಜೆಪಿ ಪಕ್ಷದ 42ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. * ಈ ವರ್ಷದ ಬಿಜೆಪಿ ಸಂಸ್ಥಾಪನಾ ದಿನ ಮೂರು ಮುಖ್ಯ ಕಾರಣಗಳಿಗಾಗಿ ಬಹಳ ಮುಖ್ಯವಾಗಿದೆ. ಈ ವರ್ಷ ನಾವುಗಳು ಸ್ವಾತಂತ್ರ್ಯ ದಿನದ 75 ನೇ ವರ್ಷವನ್ನು ಆಚರಣೆ ಮಾಡುತ್ತಿದ್ದೇವೆ ಇದು ಒಂದು ಸಂತೋಷದ ಸುದ್ದಿಯಾಗಿದೆ. * ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿರುವು ಹಿನ್ನಲೆಯಿಂದಾಗಿ ಭಾರತಕ್ಕೆ ಹೊಸ ಹೊಸ ಅವಕಾಶಗಳು ಲಭ್ಯವಾಗುತ್ತಿವೆ. * ಬಿಜೆಪಿ ಇತ್ತೀಚೆಗೆ 4 ರಾಜ್ಯಗಳಲ್ಲಿ ವಿಜಯವನ್ನು ಗಳಿಸಿ ಅಧಿಕಾರವನ್ನು ಪಡೆದುಕೊಂಡಿದೆ. ಸರಿ ಸುಮಾರು 3 ದಶಕಗಳ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯು 100ರ ಗಡಿಯನ್ನು ದಾಟಿದೆ ಎಂದು ತಿಳಿಸಿದ್ದಾರೆ. * ಭಾರತೀಯ ಜನತಾ ಪಕ್ಷವು ಭಾರತದಲ್ಲಿನ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ, ಇದು 2014 ರಿಂದ ಅದರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಡಿಯಲ್ಲಿ ಭಾರತ ಗಣರಾಜ್ಯದ ಆಡಳಿತ ರಾಜಕೀಯ ಪಕ್ಷವಾಗಿದೆ. ಈ ಪಕ್ಷವು ಹೆಚ್ಚು ಹಳೆಯ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೊಂದಿಗೆ ನಿಕಟವಾದ ಸೈದ್ಧಾಂತಿಕ ಹಾಗೂ ಸಾಂಸ್ಥಿಕ ಸಂಪರ್ಕವನ್ನು ಹೊಂದಿದೆ. 2022 ರ ಫೆಬ್ರವರಿ. 17 ರಂತೆ, ರಾಷ್ಟ್ರೀಯ ಸಂಸತ್ತು ಹಾಗೂ ರಾಜ್ಯ ಶಾಸಕಾಂಗಗಳಲ್ಲಿ ಪ್ರಾತಿನಿಧ್ಯದ ವಿಷಯದಲ್ಲಿ ಈ ಪಕ್ಷವು ದೇಶದ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. * ಬಿಜೆಪಿಯ ಮೂಲವು ಈ ಹಿಂದೆ 1951 ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಂದ ರಚಿಸಲ್ಪಟ್ಟ ಭಾರತೀಯ ಜನಸಂಘದಲ್ಲಿದೆ. ಮತ್ತೇ 1977 ರಲ್ಲಿ ತುರ್ತು ಪರಿಸ್ಥಿತಿಯ ನಂತರ, ಜನಸಂಘವು ಜನತಾ ಪಕ್ಷವನ್ನು ರಚಿಸಲು ಹಲವಾರು ಇತರ ಪಕ್ಷಗಳಜೊತೆಗೆ ವಿಲೀನಗೊಂಡಿದೆ. ಅದೇ ವರ್ಷ ಅಂದರೆ 1977 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಪಕ್ಷವನ್ನು ಸೋಲಿಸಿತು. ಬಿಜೆಪಿ ಪಕ್ಷವು 1996 ರಲ್ಲಿ ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.