Job Description: * ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇತ್ತೀಚಿಗೆ ತಮ್ಮ ರಾಜ್ಯದ ವಿಲ್ಲುಪುರಂ ಜಿಲ್ಲೆಯಲ್ಲಿ ಸಮತ್ವಪುರಂ (ಸಮಾನತೆಯ ಗ್ರಾಮ) ವನ್ನು ಉದ್ಘಾಟಿಸಿದ್ದಾರೆ. ದ್ರಾವಿಡ ಮಾದರಿಯು ಸಮಾನತೆ ಸಾಧಿಸುವ ಏಕೈಕ ಮಾರ್ಗ ಇದಾಗಿದೆ ಎಂದಿದ್ದಾರೆ. * ಈ ಹಿಂದೆ ಸಮತಾವಾದಿ ಸಮಾಜದ ಖಾತರಿ ನೀಡಲು ಡಿಎಂಕೆನ ನಾಯಕ ಮತ್ತು ಅವರ ತಂದೆ ಕಲೈಂಞಾರ್ ಕರುಣಾನಿಧಿ ಅವರು ಸಮತ್ವಪುರಂ ಪರಿಕಲ್ಪನೆಯನ್ನು ಪರಿಚಯಿಸಿದ್ದರು ಎನ್ನಲಾಗಿದೆ. ಜಾತಿ ಮತ್ತು ಧಾರ್ಮಿಕ ಸಮಸ್ಯೆಗಳಲ್ಲಿ ಸಿಲುಕಿರುವವರ ಸಮಾಜವನ್ನು ಪುನರುಜ್ಜೀವನಗೊಳಿಸಲು ಪೆರಿಯಾರ್ ಅವರು ಈ ಸಮಾನತೆಯ ಗ್ರಾಮ ಯೋಜನೆಗೆ ಹೆಸರನ್ನು ಇಟ್ಟಿದ್ದಾರೆ. ಈ ಯೋಜನೆ ಮೂಲಕ ಎಲ್ಲ ಸೌಲಭ್ಯಗಳು ಹಾಗೂ ನೂತನವಾಗಿ ಅಭಿವೃದ್ಧಿಗೊಳಿಸಲಾಗಿರುವ ವಸತಿ ಪ್ರದೇಶದಲ್ಲಿನ ಅನೇಕ ಸಮುದಾಯಗಳ ಜನರು ಜೊತೆಯಾಗಿ ವಾಸಿಸುತ್ತಾರೆ. * ಪ್ರಸ್ತುತ ತಮಿಳುನಾಡು ರಾಜ್ಯವು ದೇಶಾದ್ಯಂತ ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಒಂದು ಹೆಜ್ಜೆ ಮುಂದೆ ಇದೆ ಎನ್ನಲಾಗಿದೆ. * ಆ ಗ್ರಾಮದಲ್ಲಿನ ಪ್ರತಿ ಮನೆಯ ಹಿಂಭಾಗದಲ್ಲಿ ಹೂವಿನ ತೋಟ ಹಾಗೂ ಅಲ್ಲಿ ವಾಸಮಾಡುತ್ತಿರುವ ಕುಟುಂಬಗಳಿಗೆ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಗ್ರಾಮೀಣ ಅಭಿವೃದ್ಧಿ ಇಲಾಖೆಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ತಿಳಿಸಿದ್ದಾರೆ.