Job Description: * ಪ್ರಸ್ತುತ ಭಾರತದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ಸಿಂಗಪುರ ಪ್ರವಾಸದಲ್ಲಿದ್ದಾರೆ, ಆ ಸಂಧರ್ಭದಲ್ಲಿ ಸಿಂಗಪುರದ ರಕ್ಷಣಾ ಸಚಿವ ಡಾ.ಎನ್‌ ಜಿ ಇಂಗ್ ಹೆನ್ ಅವರನ್ನು ಭೇಟಿಯಾಗಿ ಮಾತುಕತೆಯನ್ನು ನಡಿಸಿದ್ದಾರೆ. ಬಳಿಕ ನರವಣೆ ಅವರು ಪಾಸಿರ್ ಲಾಬಾ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಶಸ್ತ್ರಾಸ್ತ್ರಗಳ ಕೌಶಲಗಳನ್ನೂ ಪರಿಶೀಲಿಸಿದ್ದಾರೆ. * ಈ ಇಬ್ಬರು ಅಧಿಕಾರಿಗಳು ಭೌಗೋಳಿಕ, ರಾಜಕೀಯ ಮತ್ತು ಉಭಯ ದೇಶಗಳ ಸೇನಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ. * ಜನರಲ್ ಮನೋಜ್ ಮುಕುಂದ್ ನರವಾಣೆ PVSM AVSM SM VSM ADC ಇವರೊನ್ನ ಭಾರತೀಯ ಸೇನಾ ಜನರಲ್ ಆಗಿದ್ದಾರೆ. ಇವರು 27 ನೇ ಸೇನಾ ಸಿಬ್ಬಂದಿಯ (COAS) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಹಾಗೂ ಚೀಫ್ಸ್ ಆಫ್ ಸ್ಟಾಫ್ ಸಮಿತಿಯ ತಾತ್ಕಾಲಿಕ ಅಧ್ಯಕ್ಷರಾಗಿದ್ದಾರೆ. * ನರವಣೆ ಈ ಹಿಂದೆ 1980 ರ ಜೂನ್ ನಲ್ಲಿ 7 ನೇ ಬೆಟಾಲಿಯನ್ ಸಿಖ್ ಲೈಟ್ ಇನ್‌ಫಾಂಟ್ರಿಗೆ ನಿಯೋಜನೆ ಗೊಂಡಿದ್ದಾರೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನ 2 ನೇ ಬೆಟಾಲಿಯನ್ ಹಾಗೂ 106 ಪದಾತಿ ದಳದ ಕಮಾಂಡರ್ ಆಗಿದ್ದಾರೆ. ಅಷ್ಟೇ ಅಲ್ಲದೇ ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಅಸ್ಸಾಂ ರೈಫಲ್ಸ್‌ಗೆ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆಪರೇಷನ್ ಪವನ್ ಸಮಯದಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಕೀಪಿಂಗ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. * ಜನರಲ್ ನರವಾಣೆ ಅವರು ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಲು ಸಿಖ್ ಲೈಟ್ ಇನ್‌ಫಾಂಟ್ರಿಯಿಂದ 3 ನೇ ಅಧಿಕಾರಿಯಾಗಿದ್ದಾರೆ.