Job Description: * ಪ್ರಸ್ತುತ ಭಾರತವು ಅತಿ ದೊಡ್ಡ ಹೆದ್ದಾರಿ ಸಂಪರ್ಕ ಹೊಂದಿರುವ ವಿಶ್ವದ 2ನೇ ರಾಷ್ಟ್ರವಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಹೇಳಿಕೆ ನೀಡಿದೆ. * ಇತ್ತೀಚಿನ ವರ್ಷಗಳಲ್ಲಿ ಭಾರತ ದೇಶದಲ್ಲಿ ಸುಮಾರು 64 ಲಕ್ಷ ಕಿ.ಮೀ. ವ್ಯಾಪ್ತಿಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ ಎಂದು NHAI ತಿಳಿಸಿದೆ. * ಪ್ರಸ್ತುತ 'ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ನವೀಕರಣ ಮತ್ತು ನೂತನ ಹೆದ್ದಾರಿಗಳ ನಿರ್ಮಾಣದ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ, ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಕೇಂದ್ರ ಸರ್ಕಾರವು ಹೆದ್ದಾರಿ ನಿರ್ಮಿಸುವದರಲ್ಲಿ ಹೊಸ ದಾಖಲೆಯನ್ನು ಬರೆದಿದೆ ಎಂದಿದ್ದಾರೆ. * ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು(NHAI) ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಈ ಹಿಂದೆ 1995 ರಲ್ಲಿ ಸ್ಥಾಪನೆ ಮಾಡಲಾಗಿದೆ. ಪ್ರಸ್ತುತ ಈ ಸಂಸ್ಥೆಯು 1980 ಕಿಮೀ ಉದ್ದದ ಹೈವೇ ನೆಟ್‌ವರ್ಕ್‌ನ 1980 ಕ್ಕೂ ಅಧಿಕ ನೆಟ್‌ವರ್ಕ್‌ನ ಕಾಯಿದೆಯ ಜವಾಬ್ದಾರಿಯನ್ನು ಒಳಗೊಂಡಿದೆ. ಇದೀಗ ಭಾರತದಲ್ಲಿ 1,32,499 ಕಿ.ಮೀ. ರಸ್ತೆ ಇದೆ. * NHAI'ಯು ಹೆದ್ದಾರಿಗಳ ಉಪಗ್ರಹ ಮ್ಯಾಪಿಂಗ್‌ಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ತಿಳುವಳಿಕೆ ಪತ್ರಕ್ಕೆ (MoU) ಸಹಿ ಹಾಕಿದೆ. * 1988 ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಯಿದೆಯ ಘೋಷಣೆಯ ಮೂಲಕ NHAI'ನ್ನು ರಚಿಸಲಾಗಿದೆ. ಆದರೆ NHAI 1995 ರ ಫೆಬ್ರವರಿ. 10 ರಂದು ಕಾರ್ಯಾಚರಣೆಯನ್ನು ಆರಂಭಿಸಿದೆ. ಹಾಗೆಯೇ ಇದು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. * ಯೋಗೇಂದ್ರ ನರೇನ್ ಎನ್ನುವವರು 1988 ರಲ್ಲಿ NHAI'ನ ಮೊದಲ ಅಧ್ಯಕ್ಷರಾಗಿದ್ದರು.