Job Description: * ಇತ್ತೀಚಿಗೆ ವೆಸ್ಟ್‌ಇಂಡೀಸ್‌ ತಂಡವು ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯನ್ನು 10 ವಿಕೆಟ್‌ಗಳ ಅಂತರದಿಂದ ಜಯಗಳಿಸಿದೆ. ವೆಸ್ಟ್‌ಇಂಡೀಸ್‌ ತಂಡವು 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಿಂದ ಗೆದ್ದು, 'ಬೋಥಂ-ರಿಚರ್ಡ್ಸ್‌ ಟ್ರೋಫಿ'ಯನ್ನು ತನ್ನದಾಗಿಸಿಕೊಂಡಿದೆ. * ಇಂಗ್ಲೆಂಡ್‌ ತಂಡವು ಕಳೆದ 50 ವರ್ಷಗಳಲ್ಲಿ ವೆಸ್ಟ್ ವಿಂಡೀಸ್‌ ನೆಲದಲ್ಲಿ ಕೇವಲ ಒಂದು ಬಾರಿ ಟೆಸ್ಟ್‌'ನ್ನು ಗೆದ್ದಿದೆ. ಅದುವೇ 2003-04ರಲ್ಲಿ ನಡೆದಿರುವ ಪಂದ್ಯವಾಗಿತ್ತು. * ಈ ಸರಣಿಯಲ್ಲಿ ಇಂಗ್ಲೆಂಡ್‌ ತಂಡವು 204 ಹಾಗೂ 120 ರನ್'ಗಳನ್ನೂ ಕಲೆಹಾಕಿತ್ತು. ಆದರೆ ವೆಸ್ಟ್‌ ಇಂಡೀಸ್‌ ತಂಡವು 297 ಹಾಗೂ ವಿಕೆಟ್‌ ನಷ್ಟವಿಲ್ಲದೆ 28 ರನ್'ಗಳನ್ನೂ ಬಾರಿಸಿ ಜಯ ಸಾಧಿಸಿದೆ. ಈ ಸರಣಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು 'ಜೋಶುವ ಡ ಸಿಲ್ವ' ಅವರು ಪಡೆದುಕೊಂಡಿದ್ದಾರೆ. ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು 'ಕ್ರೆಗ್‌ ಬ್ರಾತ್‌ವೇಟ್‌' ಅವರು ಪಡೆದುಕೊಂಡಿದ್ದಾರೆ. * ರಿಚರ್ಡ್ಸ್-ಬೋಥಮ್ ಟ್ರೋಫಿಯು ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ವಿಜೇತರಿಗೆ ನೀಡಲಾಗುವ ಟ್ರೋಫಿಯಾಗಿದೆ. ವೆಸ್ಟ್ ಇಂಡೀಸ್-ಇಂಗ್ಲೆಂಡ್ ಪಂದ್ಯಗಳಲ್ಲಿ ಪ್ರತಿಸ್ಪರ್ಧಿಗಳಾಗಿ ಆಡಿದ ಮಾಜಿ ಅಂತರಾಷ್ಟ್ರೀಯ ಆಟಗಾರರಾದ ವಿವ್ ರಿಚರ್ಡ್ಸ್ ಹಾಗೂ ಇಯಾನ್ ಬೋಥಮ್ ಅವರ ಹೆಸರನ್ನು ಪ್ರಧಾನ ಮಾಡಲಾಗುವ ಪ್ರಶಸ್ತಿಯಾಗಿದೆ. * 2021 ರ ಮಾರ್ಚ್'ನಲ್ಲಿ ಕ್ರಿಕೆಟ್ ವೆಸ್ಟ್ ಇಂಡೀಸ್ ಮೊದಲ ಆವೃತ್ತಿಯ ಪಂದ್ಯವನ್ನು ಘೋಷಣೆ ಮಾಡಿದೆ.