Job Description: * ಈಶಾನ್ಯ ಭಾರತ ರಾಜ್ಯಗಳಾಗಿರುವ ಅಸ್ಸಾಂ ಹಾಗೂ ಮೇಘಾಲಯ ರಾಜ್ಯಗಳ ನಡುವೆ "5" ದಶಕದದಿಂದ ಬಗೆಹರಿಯದೆ ಬಾಕಿ ಉಳಿದು ಕೊಂಡಿರುವ ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವ ಒಪ್ಪಂದಕ್ಕೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಿಮಂತ ಬಿಸ್ವ ಶರ್ಮ ಮತ್ತು ಕಾನ್ರಾಡ್‌ ಸಂಗ್ಮಾ ಅವರು ಪರಸ್ಪರ ಒಪ್ಪಿಕೊಂಡು ಸಹಿ ಹಾಕಿದ್ದಾರೆ. * ಮೇಘಾಲಯ ರಾಜ್ಯದಲ್ಲಿ ವಿವಾದದ 12 ಪ್ರದೇಶಗಳಿವೆ ಹಾಗೂ ನಿರ್ಣಯದ ಮೊದಲ ಹಂತದಲ್ಲಿ '06' ಪ್ರದೇಶಗಳ ವಿವಾದವನ್ನು ಬಗೆಹರಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ಮೊದಲು ಮಾಹಿತಿ ನೀಡಿದ್ದರು. * ಈ ಎರಡು ರಾಜ್ಯಗಳ ವಿವಾದದ ಒಪ್ಪಂದವು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಡೆದಿದೆ. ದೀರ್ಘಕಾಲೀನ ಈ ವಿವಾದವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದಿದ್ದಾರೆ. * ಈ ರಾಜ್ಯಗಳಲ್ಲಿನ ವಿವಾದದ ಕೇಂದ್ರ ಬಿಂದುವಾಗಿರುವ 12 ಪ್ರದೇಶಗಳಲ್ಲಿ 6 ಪ್ರದೇಶಗಳ ವಿವಾದದ ಅಂತ್ಯವನ್ನು ಕಂಡಿವೆ. ಹಾಗೆಯೇ ಶೇ. 70 ಗಡಿಭಾಗಗಳನ್ನು ಹೊಂದಿದೆ ಎಂದಿದ್ದಾರೆ. * ಈ ಹಿಂದೆ 1972 ರಲ್ಲಿ ಅಸ್ಸಾಂ ರಾಜ್ಯದಿಂದ ಮೇಘಾಲಯವು ಬೇರ್ಪಟ್ಟು ಪ್ರತ್ಯೇಕ ರಾಜ್ಯವಾಗಿದೆ ಆಗಿನಿಂದಲೂ ಈ ಎರಡು ರಾಜ್ಯಗಳ ಗಡಿ ವಿವಾದವು ಆರಂಭವಾಗಿದೆ. ಎರಡು ರಾಜ್ಯಗಳ ವಿವಾದವು ಹೊಸ ರಾಜ್ಯ ರಚನೆಯ ಪ್ರಾರಂಭದಲ್ಲಿನ ಒಪ್ಪಂದದಿಂದಾಗಿ ಗಡಿಗಳ ಗಡಿರೇಖೆಯ ಭಿನ್ನಾಭಿಪ್ರಾಯದಿಂದ ಈ ರಾಜ್ಯಗಳ ಗಡಿ ಸಮಸ್ಯೆಗಳು ಸೃಷ್ಟಿಯಾಗಿವೆ. * ಈ ಎರಡು ರಾಜ್ಯಗಳ ವಿವಾದವನ್ನು ಪರಿಹರಿಸಲು ಕಳೆದ ವರ್ಷ ಆಗಸ್ಟ್‌ನಲ್ಲಿ, ಅಸ್ಸಾಂ ಹಾಗೂ ಮೇಘಾಲಯ ಸರ್ಕಾರಗಳು '12' ವಿವಾದಿತ ಪ್ರದೇಶಗಳ ಪೈಕಿ '06' ಗಡಿ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸುವ ಸಲುವಾಗಿ ಉಭಯ ರಾಜ್ಯಗಳ '03' ಪ್ರಾದೇಶಿಕ ಸಮಿತಿಯನ್ನು ರಚಿಸಲಾಗಿದೆ. ಇಲ್ಲಿನ ಪ್ರತಿ ಸಮಿತಿಯು ಆಯಾ ರಾಜ್ಯದ ಕ್ಯಾಬಿನೆಟ್ ಸಚಿವರು ಹಾಗೂ ಅಧಿಕಾರಿಗಳು ಸೇರಿ '05' ಸದಸ್ಯರನ್ನು ಹೊಂದಿದೆ.