Job Description: * ಇತ್ತೀಚಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರು ತಿಳಿಸಿರುವ ಪ್ರಕಾರ ಬಿಮ್‌ಸ್ಟೆಕ್‌(BIMSTEC)ನ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಉಗ್ರವಾದದ ವಿರುದ್ಧ ಹೋರಾಡಬೇಕು ಎಂದಿದ್ದಾರೆ. * ಶ್ರೀಲಂಕಾದ ರಾಜ್ಯಧಾನಿ ಕೊಲಂಬೊದಲ್ಲಿನ 18ನೇ ಬಿಮ್‌ಸ್ಟೆಕ್ ಸದಸ್ಯ ರಾಷ್ಟ್ರಗಳ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರು ಈ ಬಗ್ಗೆ ಚರ್ಚಿಸಿದರು, ಹಾಗೆಯೇ ಸಹಕಾರದ ಕ್ಷೇತ್ರಗಳನ್ನು ಮತ್ತಷ್ಟು ವೃದ್ಧಿಸಲು ವಿಶೇಷವಾಗಿ ಸಂಪರ್ಕ ಹೊಂದಲು ಇಂಧನ ಹಾಗೂ ಕಡಲತೀರದ ವಿಚಾರದಲ್ಲಿ ಭಾರತದ ಬದ್ಧತೆಯಾ ಬಗ್ಗೆ ತಿಳಿಸಿದರು. * ಇದೀಗ ಬಿಮ್‌ಸ್ಟೆಕ್ ಸದಸ್ಯ ರಾಷ್ಟ್ರಗಳು ಒಟ್ಟಿಗೆ ಸೇರಿಕೊಂಡು "ಭಯೋತ್ಪಾದನೆ, ಹಿಂಸಾತ್ಮಕ ಉಗ್ರವಾದ, ದೇಶೀಯ ಅಪರಾಧ, ಸೈಬರ್-ದಾಳಿಗಳು ಹಾಗೂ ಮಾದಕವಸ್ತು ಕಳ್ಳಸಾಗಣೆಯನ್ನು ವಿರುದ್ಧವಾಗಿ ಹೋರಾಡಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ 'ಸಹಕಾರ ಕ್ಷೇತ್ರವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು ಸಕ್ರಿಯ ವ್ಯಾಪಾರ ಸಹಯೋಗ ಹಾಗೂ ಸಾಮಾನ್ಯ ಯೋಜನೆಗಳಿಗೆ ಉತ್ತೇಜನವನ್ನು ನೀಡುತ್ತದೆ ಎಂದಿದ್ದಾರೆ. * ಈ ಬಿಮ್‌ಸ್ಟೆಕ್ ಸಚಿವರ ಸಭೆಯಲ್ಲಿ ಭಾರತೀಯ ಸಚಿವ ಜೈಶಂಕರ್ ಅವರು ನೇಪಾಳ, ಭೂತಾನ್ ರಾಷ್ಟ್ರಗಳ ಸಚಿವರನ್ನು ಭೇಟಿ ಮಾಡಿ, ಇಂಧನ, ಜಲವಿದ್ಯುತ್ ಯೋಜನೆಗಳಲ್ಲಿನ ಸಹಕಾರದ ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೇ ಇತ್ತೀಚಿಗೆ ಭಾರತವು ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ದೇಶವನ್ನು ರಕ್ಷಿಸಲು ಆರ್ಥಿಕ ಪರಿಹಾರ ಪ್ಯಾಕೇಜ್'ನ್ನು ವಿಸ್ತರಿಸಿದ ಎಂದು ತಿಳಿಸಿದ್ದಾರೆ. * ಪ್ರಸ್ತುತ ಬಿಮ್‌ಸ್ಟೆಕ್ ಸದಸ್ಯತ್ವ ಹೊಂದಿರುವ ರಾಷ್ಟ್ರಗಳು ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ನೇಪಾಳ ಹಾಗೂ ಭೂತಾನ್ ದೇಶಗಳಾಗಿವೆ. * ಶ್ರೀಲಂಕಾ ತಂತ್ರಜ್ಞಾನ, ಮೀನುಗಾರಿಕೆ ಹಾಗೂ ಹೈಬ್ರಿಡ್ ವಿದ್ಯುತ್ ಯೋಜನೆಗಳಂತಹ ವೈವಿಧ್ಯಮಯ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಸಲು ಭಾರತ ಹಾಗೂ ಶ್ರೀಲಂಕಾ ದೇಶಗಳ '06' ಒಪ್ಪಂದಗಳಿಗೆ ಪರಸ್ಪರ ಒಪ್ಪಿಕೊಂಡು ಸಹಿ ಹಾಕಿವೆ ಎಂದು ಭಾರತೀಯ ಹೈಕಮಿಷನ್ ಕಚೇರಿ ಈ ಬಗ್ಗೆ ವರದಿ ಮಾಡಿದೆ.