Job Description: * ಪ್ರಸ್ತುತ ಮೇಘಾಲಯದ ಸರಿ ಸುಮಾರು 70 ಗ್ರಾಮಗಳಲ್ಲಿ ಸದ್ಯ ಇರುವ, ಪ್ರಕೃತಿ ಸಹಜವಾಗಿ ಮೂಡಿರುವ 'ಬೇರುಗಳ ತೂಗುಸೇತುವೆ'ಗಳನ್ನೂ ಇದೀಗ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. * ಪ್ರಕೃತಿ ಸಹಜವಾಗಿ ಸಿದ್ದವಾಗಿರುವ ಈ ತೂಗು ಸೇತುವೆಗಳು ಸಾಮಾಜಿಕ, ಸಾಂಸ್ಕೃತಿಕವಾಗಿ ಸ್ಥಳೀಯ ಜನರು ಪ್ರಕೃತಿಯ ಜೊತೆಗೆ ಬೆಸೆದುಕೊಂಡಿರುವುದರ ಸಂಕೇತಗಳಾಗಿವೆ. * ಇದೀಗ ಮೇಘಾಲಯ ರಾಜ್ಯದಲ್ಲಿನ ಈ 'ಬೇರುಗಳ ಸೇತುವೆಗಳು' ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗುವುದು ರಾಜ್ಯಕ್ಕೆ ಖುಷಿಯ ಸುದ್ದಿಯಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಅವರು ತಿಳಿಸಿದ್ದಾರೆ. * ಇದೀಗ ಮೇಘಾಲಯ ರಾಜ್ಯದಲ್ಲಿನ 72 ಗ್ರಾಮಗಳ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಈ ರೀತಿಯ ಬೇರುಗಳ ಸೇತುವೆಗಳಿವೆ ಎನ್ನಲಾಗಿದೆ. * ಇದೀಗ ಮೇಘಾಲಯ ರಾಜ್ಯವನ್ನು ಜೀವಂತ ಬೇರು ಸೇತುವೆ ಎಂದು ಕರೆಯಲಾಗುತ್ತದೆ. ಕಾರಣ ಇಲ್ಲಿನ ಕಾಡಿನಲ್ಲಿ ಅನೇಕ ಬೇರುಗಳ ಸೇತುವೆಗಳು ಅಸ್ತಿತ್ವದಲ್ಲಿವೆ ಈ ಸೇತುವೆಗಳನ್ನು ಖಾಸಿ ಹಾಗೂ ಜೈನ್ತಿಯಾ ಬುಡಕಟ್ಟು ಜನಾಂಗದವರು ನಿರ್ಮಿಸಿದ್ದಾರೆ ಎನ್ನಲಾಗಿದೆ, ಪ್ರಸ್ತುತ ಈ ಸೇತುವೆಗಳು 50 ಕ್ಕೂ ಅಧಿಕ ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಎಂದಿದ್ದಾರೆ.