Job Description: * ಇದೇ ಏಪ್ರಿಲ್ 6 ರಿಂದ 14ರವರೆಗೆ ಸಾಮಾಜಿಕ ಸಾಮರಸ್ಯ ನ್ಯಾಯ ದಿನ'ವಾಗಿ ಆಚರಣೆ ಮಾಡುವದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. * ಇತ್ತೀಚಿಗೆ ಮೋದಿ ಯವರು ದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದರು. ಬರುವ ಏಪ್ರಿಲ್. 14 ರಂದು ಭಾರತದ ಮಾಜಿ ಪ್ರಧಾನಮಂತ್ರಿಗಳ ಮ್ಯೂಸಿಯಂನ ಉದ್ಘಾಟಣೆಯನ್ನು ನೆರವೇರಿಸಲಾಗುವದು ಎಂದು ತಿಳಿಸಿದ್ದಾರೆ. ಈ ಉದ್ಯಾನವನ(ಮ್ಯೂಸಿಯಂ) ತೀನ್ ಮೂರ್ತಿ ಭವನ್ದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಉದ್ಯಾನವನದಲ್ಲಿ ಮಾಜಿ ಪ್ರಧಾನಮಂತ್ರಿಗಳಿಗೆ ಸಂಭಂದವಿರುವ ಅನೇಕ ಮಹತ್ವದ ವಿಚಾರಗಳ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. * ಭಾರತದ ಮಾಜಿ ಪ್ರಧಾನಮಂತ್ರಿಗಳ ಮ್ಯೂಸಿಯಂನ್ನು ನಿರ್ಮಾಣ ಮಾಡಲಾಗಿದೆ, ಇದನ್ನು ಇದೇ ಏಪ್ರಿಲ್. 14 ರಂದು ಉದ್ಘಾಟಿಸಲಾಗುವುದು ಎಂದಿದ್ದಾರೆ.