Job Description: * ಭಾರತೀಯ ಮೂಲದ ಅಮೆರಿಕನ್ ರಾಜ್ ಸುಬ್ರಹ್ಮಣ್ಯಂ ಅವರನ್ನು ಪ್ರಸ್ತುತ ಅಮೇರಿಕ ದೇಶದ ಬಹುರಾಷ್ಟ್ರೀಯ ಕೊರಿಯರ್ ಪೂರೈಕೆಯ ದೈತ್ಯ ಕಂಪೆನಿಯಾಗಿರುವ ಫೆಡೆಕ್ಸ್'(FedEx)ನ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. * ಪ್ರಸ್ತುತ ಫೆಡೆಕ್ಸ್ CEO ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಅವರು ಮುಂಬರುವ ಜೂನ್. 1ರಂದು ತಮ್ಮ CEO ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ, ನಂತರ ಅವರ ಸ್ಥಾನಕ್ಕೆ ಭಾರತೀಯ ಮೂಲದ ಅಮೆರಿಕನ್ ರಾಜ್ ಸುಬ್ರಮಣಿಯನ್ ನೇಮಕಗೊಂಡಿದ್ದಾರೆ. * ಫೆಡ್ಎಕ್ಸ್ ಕಾರ್ಪೊರೇಶನ್, ಈ ಮೊದಲು ಫೆಡರಲ್ ಎಕ್ಸ್‌ಪ್ರೆಸ್ ಕಾರ್ಪೊರೇಶನ್ ಹಾಗೂ ನಂತರ ಎಫ್‌ಡಿಎಕ್ಸ್ ಕಾರ್ಪೊರೇಶನ್, ಮೆಂಫಿಸ್, ಟೆನ್ನೆಸ್ಸೀ ಮೂಲದ ಸಾರಿಗೆ, ಇ-ಕಾಮರ್ಸ್ ಹಾಗೂ ಸೇವೆಗಳ ಮೇಲೆ ಕೇಂದ್ರೀಕರಿಸಿರುವ ಅಮೇರಿಕನ್ ಬಹುರಾಷ್ಟ್ರೀಯ ಸಂಘಟಿತ ಹಿಡುವಳಿ ಕಂಪನಿಯಾಗಿದೆ. * US ಹಾಗೂ ಪ್ರಪಂಚದ ಎರಡರಲ್ಲೂ ಫೆಡೆಕ್ಸ್‌ನ ಪ್ರಾಮುಖ್ಯತೆಯುನ್ನು ಪಡೆದಿದೆ, ಫೆಡ್‌ಎಕ್ಸ್‌ನ ಏರ್ ಶಿಪ್ಪಿಂಗ್ ಸೇವೆಗಳು ಮೆಂಫಿಸ್ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತನ್ನ ಮುಖ್ಯ ಕೇಂದ್ರವನ್ನು 2020 ರ ವೇಳೆಗೆ ವಿಶ್ವದ ಅತ್ಯಂತ ಜನನಿಬಿಡ ಸರಕು ವಿಮಾನ ನಿಲ್ದಾಣವಾಗಿ ಮಾರ್ಪಡಿಸಿದೆ. ಇದೀಗ ಮತ್ತು ಹಾಂಗ್ ಕಾಂಗ್ ಮೆಂಫಿಸ್‌'ನ ನಂತರದ ವಿಶ್ವದ 2ನೇ ಜನನಿಬಿಡ ಕಾರ್ಗೋ ವಿಮಾನ ನಿಲ್ದಾಣವಾಗಿದೆ.