Job Description: * ಇತ್ತೀಚಿಗೆ ಭದ್ರತಾ ಸಂಪುಟ ಸಮಿತಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ಜರುಗಿರುವ ಸಭೆಯಲ್ಲಿ 3, 887 ಕೋಟಿ ರೂ. ವೆಚ್ಚದಲ್ಲಿ ಸ್ವದೇಶಿ ನಿರ್ಮಿತ 15 ಲಘು ಯುದ್ಧ ಹೆಲಿಕಾಪ್ಟರ್ ಖರೀದಿಸಲು ಅನುಮೋದನೆಯನ್ನು ನೀಡಿದ್ದಾರೆ. * ಭದ್ರತಾ ಸಂಪುಟ ಸಮಿತಿಯ ಅನುಮೋದನೆಯಿಂದಾಗಿ ಭಾರತೀಯ ವಾಯುಪಡೆಗಾಗಿ 10 ಹೆಲಿಕಾಪ್ಟರ್ ಮತ್ತು ಭಾರತೀಯ ಸೇನೆಗೆ '05' ಹೆಲಿಕಾಪ್ಟರ್ ಖರೀದಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ. * ಪ್ರಸ್ತುತ ಶೇ. 45 ರಷ್ಟು ಸ್ವದೇಶಿ ಅಂಶಗಳ ಜೊತೆಗೆ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿರುವ ಲಘು ಯುದ್ಧ ಹೆಲಿಕಾಪ್ಟರ್'ಗಳು, ಶತ್ರು ರಾಷ್ಟ್ರಗಳ ವಾಯು ರಕ್ಷಣೆ ಹಾಗೂ ಪ್ರತಿ ಬಂಡಾಯ ಕಾರ್ಯಾಚರಣೆಗಳ ನಾಶ, ಪತ್ತೆಯ ಜೊತೆಗೆ ರಕ್ಷಣೆಗೆ ಅಗತ್ಯವಿರುವ ವಿವಿಧ ರೀತಿಯ ಕುಶಲತೆಗಳನ್ನೂ ಒಳಗೊಂಡಿರುವದಾಗಿ ರಕ್ಷಣಾ ಸಚಿವಾಲಯ ಈ ಬಗ್ಗೆ ವರದಿ ಮಾಡಿದೆ. * HAL ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿದ ಅಭಿವೃದ್ಧಿಪಡಿಸಿರುವ ಭಾರತೀಯ ಬಹು-ಪಾತ್ರ ದಾಳಿ ಹೆಲಿಕಾಪ್ಟರ್ ಇದಾಗಿದೆ. * LCH'ನ ಅಭಿವೃದ್ಧಿಗೆ ಪ್ರಚೋದನೆಯು ಕಾರ್ಗಿಲ್ ಯುದ್ಧದ ರೂಪದಲ್ಲಿ ಒಂದಾಗಿತ್ತು, 1999 ರಲ್ಲಿ ಭಾರತ ಹಾಗೂ ನೆರೆಯ ಪಾಕಿಸ್ತಾನದ ನಡುವೆ ನಡೆದ ಸಂಘರ್ಷದಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಿತ್ತು. 2006 ರಲ್ಲಿ ಕಂಪನಿಯು ಅಂತಹ ರೋಟರ್‌ಕ್ರಾಫ್ಟ್'ನ್ನು ಸಿದ್ದಪಡಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಘೋಷಣೆ ಮಾಡಿದೆ. ಇದನ್ನು ಸರಳವಾಗಿ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಎನ್ನಲಾಗುತ್ತದೆ.