Job Description: * ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರು ಆಗ್ನೇಯ ಏಷ್ಯಾ ದೇಶಗಳ ಸಂಘಟನೆಯ(ಆಸಿಯಾನ್) ನಾಯಕರ ಜತೆ ವಿಶೇಷ ಶೃಂಗಸಭೆ ನಡೆಸುವುದಾಗಿ ಘೋಷಿಸಿದ್ದಾರೆ. ಇತ್ತೀಚಿಗೆ ಅಧ್ಯಕ್ಷ ಜೋ ಬೈಡನ್ ಅವರು ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರ ಜಿತೆಗೆ ಶ್ವೇತಭವನದಲ್ಲಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. * ಪ್ರಧಾನಿ ಲೀ ಹಾಗೂ ಜೋ ಬೈಡನ್ ಅವರು ಆಸಿಯಾನ್ ದೇಶಗಳ ಬಗ್ಗೆ ಅನೇಕ ವಿಚಾರಗಳನ್ನು ವಿನಿಮಯಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಇದರ ಜೊತೆಗೆ ವಾಷಿಂಗ್ಟನ್‌ನಲ್ಲಿ ಆಸಿಯಾನ್ ನಾಯಕರ ಜೊತೆಗೆ ವಿಶೇಷ ಶೃಂಗಸಭೆಯನ್ನು ಏರ್ಪಡಿಸಲಾಗುವದು ಎಂದಿದ್ದಾರೆ. * ASEAN (ಆಸಿಯಾನ್) ಅಧಿಕೃತವಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘವಾಗಿದೆ. ಇದು 10 ಸದಸ್ಯರ ರಾಜಕೀಯ ಹಾಗೂ ಆರ್ಥಿಕ ಒಕ್ಕೂಟವಾಗಿದೆ. ಆಗ್ನೇಯ ಏಷ್ಯಾದ ರಾಜ್ಯಗಳು, ಹಾಗೂ ಅಂತರ್ ಸರ್ಕಾರಿ ಸಹಕಾರವನ್ನು ಉತ್ತೇಜಿಸಲು ಹಾಗೂ ಅದರ ಸದಸ್ಯರ ಜೊತೆಗೆ ಏಷ್ಯಾದ ಇನ್ನಿತರ ದೇಶಗಳ ನಡುವಿನ ಆರ್ಥಿಕ, ರಾಜಕೀಯ, ಭದ್ರತೆ, ಮಿಲಿಟರಿ, ಶೈಕ್ಷಣಿಕ ಹಾಗೂ ಸಾಮಾಜಿಕ ಸಾಂಸ್ಕೃತಿಕ ಏಕೀಕರಣವನ್ನು ಸುಗಮಗೊಳಿಸಲಾಗುತ್ತದೆ. * ಇದೀಗ ಈ ASEAN ನ ಪ್ರಾಥಮಿಕ ಉದ್ದೇಶವು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಹಾಗೂ ಈ ಮೂಲಕ ಸಾಮಾಜಿಕ ಪ್ರಗತಿಯ ಜೊತೆಗೆ ಸಾಂಸ್ಕೃತಿಕ ಅಭಿವೃದ್ಧಿಯಾಗಿದೆ. ಇದರ ಕಾನೂನಿನ ನಿಯಮ ಹಾಗೂ ವಿಶ್ವಸಂಸ್ಥೆಯ ಚಾರ್ಟರ್ ತತ್ವದ ಆಧಾರದ ಅನ್ವಯ ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ಉತ್ತೇಜನ ನೀಡಲಾಗುತ್ತದೆ. ಪ್ರಸ್ತುತ ಈ ASEAN 2003 ರಲ್ಲಿ '03' ಸ್ತಂಭಗಳನ್ನು ಹೊಂದಿರುವ ASEAN ಸಮುದಾಯವನ್ನು ಸ್ಥಾಪನೆ ಮಾಡಲು ಯುರೋಪಿಯನ್ ಒಕ್ಕೂಟದ ಹಾದಿಯಲ್ಲಿ ಸಾಗಿದೆ. ಈ ASEAN ಧ್ವಜ ಹಾಗೂ ಲಾಂಛನದಲ್ಲಿರುವ ಅಕ್ಕಿಯ ಹತ್ತು ಕಾಂಡಗಳು ಹತ್ತು ಆಗ್ನೇಯ ಏಷ್ಯಾದ ದೇಶಗಳನ್ನು ಜೊತೆಯಾಗಿ ಪ್ರತಿನಿಧಿಸುತ್ತವೆ. * ASEAN ನಿಯಮಿತವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಅಷ್ಟೇ ಅಲ್ಲದೇ ಅದರಆಚೆಗಿನ ಇನ್ನಿತರ ದೇಶಗಳನ್ನು ಅಳವಡಿಸಿಕೊಳ್ಳುತ್ತದೆ. ಏಷ್ಯಾ-ಪೆಸಿಫಿಕ್‌ನಲ್ಲಿ ಸಹಕಾರಕ್ಕಾಗಿ ಕೇಂದ್ರೀಯ ಒಕ್ಕೂಟ, ಹಾಗೂ ಪ್ರಭಾವಶಾಲಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ಅನೇಕ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ ಹಾಗೂ ಪ್ರಪಂಚದಾದ್ಯಂತ ರಾಜತಾಂತ್ರಿಕ ಕಾರ್ಯಗಳನ್ನು ನಿಯೋಜಿಸುತ್ತದೆ.