Job Description: * ಇತ್ತೀಚಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾರತ್ ಬಯೋಟೆಕ್‌ನ MD ಕೃಷ್ಣ.L ಹಾಗೂ ಜಂಟಿ MD ಸುಚಿತ್ರಾ.L ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಸ್ವೀಕರಿಸಿದರು. * ಪ್ರಸ್ತುತ MD ಕೃಷ್ಣ.L ಹಾಗೂ ಜಂಟಿ MD ಸುಚಿತ್ರಾ.L ಅವರು ಭಾರತ್ ಬಯೋಟೆಕ್ ಸಂಸ್ಥಾಪಕರಾಗಿದ್ದಾರೆ, ಇತ್ತೀಚಿಗೆ ಕೋವಿಡ್-19 ವಿರುದ್ಧದ ಸ್ಥಳೀಯ ಲಸಿಕೆಯಾದ ಕೋವಾಕ್ಸಿನ್‌(Covaxin)ನ ತಯಾರಕರು ಇವರಾಗಿದ್ದಾರೆ. ಈ ರೀತಿಯಾಗಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಿರುವ ಅನೇಕ ಕೊಡುಗೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಭಾರತ್ ಬಯೋಟೆಕ್(Bharat Biotech) ಹೈದರಾಬಾದ್'ನಲ್ಲಿದೆ. * ದೇಶದ ಅತ್ಯುನ್ನತ ನಾಗರಿಕ ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ಪ್ರಧಾನ ಮಾಡಲಾಗುತ್ತದೆ. ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀಯಾಗಿದೆ. ಈ ಮೂರೂ ಪ್ರಶಸ್ತಿಗಳನ್ನು ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಹಾಗೂ ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಹಾಗೂ ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ಇತ್ಯಾದಿಗಳಿಗಾಗಿ ನೀಡಲಾಗುತ್ತದೆ. - 'ಪದ್ಮ ವಿಭೂಷಣ' ಅಸಾಧಾರಣ ಹಾಗೂ ವಿಶಿಷ್ಟ ಸೇವೆಗಾಗಿ ಪ್ರಧಾನ ಮಾಡಲಾಗುತ್ತದೆ. - 'ಪದ್ಮಭೂಷಣ' ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಪ್ರಧಾನ ಮಾಡಲಾಗುತ್ತದೆ. - 'ಪದ್ಮಶ್ರೀ' ಯಾವುದೇ ಕ್ಷೇತ್ರದಲ್ಲಿ ಮಾಡಿರುವ ವಿಶಿಷ್ಟ ಸೇವೆಗಾಗಿ ಪ್ರಧಾನ ಮಾಡಲಾಗುತ್ತದೆ. * ಇತ್ತೀಚಿಗೆ ರಾಷ್ಟ್ರಪತಿ ಭವನದಲ್ಲಿ ಜರುಗಿದ 2022 ನೇ ಸಾಲಿನ ಸಮಾರಂಭದಲ್ಲಿ '02' ಪದ್ಮವಿಭೂಷಣ, '09' ಪದ್ಮಭೂಷಣ ಹಾಗೂ '54' ಪದ್ಮಶ್ರೀ ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅರ್ಹರಿಗೆ ಪ್ರದಾನ ಮಾಡಿದ್ದಾರೆ. * ಪ್ರಸ್ತುತ ವರ್ಷದ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ '04' ಪದ್ಮವಿಭೂಷಣ, '17' ಪದ್ಮಭೂಷಣ ಹಾಗೂ '107' ಪದ್ಮಶ್ರೀ ಪ್ರಶಸ್ತಿಗಳು ಒಳಗೊಂಡಿವೆ.