Job Description: * ಪ್ರಸ್ತುತ ದೇಶವು 50,000 ಬಯಲು ಶೌಚ ಮುಕ್ತ (ODF) ಪ್ಲಸ್ ಗ್ರಾಮಗಳನ್ನು ಹೊಂದಿರುವ ಮೈಲಿಗಲ್ಲನ್ನು ದಾಟಿದೆ. * ಪ್ರಸ್ತುತ ತೆಲಂಗಾಣ ರಾಜ್ಯವು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಹಂತ-II ರ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 13,960 ODF ಪ್ಲಸ್ ಗ್ರಾಮಗಳನ್ನು ಹೊಂದಿರುವ ಹಾಗೂ ಉನ್ನತ-ಕಾರ್ಯನಿರ್ವಹಣೆಯ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು ಹಾಗೂ ಮಧ್ಯಪ್ರದೇಶ ರಾಜ್ಯಗಳಿವೆ. * 2020 ರಲ್ಲಿ, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಹಂತ-II'ನ್ನು 2024ನೇ ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ ಇರುವ ಎಲ್ಲಾ ಗ್ರಾಮಗಳನ್ನು ODF ಪ್ಲಸ್ ಎಂದು ಘೋಷಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. * ಪ್ರಸ್ತುತ ಜಲ ಶಕ್ತಿ ಸಚಿವಾಲಯದ ಪ್ರಕಾರ, ODF ಪ್ಲಸ್ ಮಿಷನ್ ಸಾಧಿಸುವುದು ಗೋಬರ್ಧನ್ ಯೋಜನೆ, ಜೈವಿಕ ವಿಘಟನೀಯ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ ಹಾಗೂ ಮಲದ ಕೆಸರು ನಿರ್ವಹಣೆಯನ್ನು ಸೇರಿದಂತೆ ಅನೇಕ ಅಂಶಗಳನ್ನು ಹೊಂದಿದೆ. ಇದೀಗ ODF ಪ್ಲಸ್ ಗ್ರಾಮಗಳನ್ನು '3' ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳು ರೈಸಿಂಗ್, ಮಹತ್ವಾಕಾಂಕ್ಷೆ ಹಾಗೂ ಮಾದರಿ, ಎಂಬ ರೀತಿಯಲ್ಲಿ ಎನ್ನಲಾಗಿದೆ. * ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ, ಅಂದಾಜು 22,000-ಗ್ರಾಮ ಪಂಚಾಯತ್‌ಗಳಿಂದ '01' ಕೋಟಿಗೂ ಅಧಿಕ ಜನರು ಹಲವಾರು ನೈರ್ಮಲ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. * ಈ ಹಿಂದೆ 2020 ರ ಫೆಬ್ರವರಿಯಲ್ಲಿ, ಜಲ ಶಕ್ತಿ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಹಂತ-II ಯೋಜನೆಯ ಅನುಷ್ಠಾನವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಹಂತ I ರ ಯಶಸ್ಸಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಹಾಗೂ ಗ್ರಾಮೀಣ ಭಾರತದಾದ್ಯಂತ ಘನ, ದ್ರವ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.