Job Description: * ದೆಹಲಿ 2021-22 ರ ಆರ್ಥಿಕ ಸಮೀಕ್ಷೆಯ ಪ್ರಕಾರ, ರಾಷ್ಟ್ರದ ರಾಜಧಾನಿ ದೇಶದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ದೆಹಲಿ ಕೂಡ ಒಂದಾಗಿದೆ. ಗೋವಾ ಹಾಗೂ ಸಿಕ್ಕಿಂ ರಾಜ್ಯಗಳು ತಲಾ ಆದಾಯದ ಪ್ರಕಾರ 3ನೇ ಸ್ಥಾನದಲ್ಲಿದೆ. * ಈ ಸಮೀಕ್ಷೆಯ ಪ್ರಕಾರ 2021-22 ರಲ್ಲಿ, ದೆಹಲಿಯ ತಲಾ ಆದಾಯವು ರಾಷ್ಟ್ರೀಯ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿದೆ, ವರ್ಷದಿಂದ ವರ್ಷಕ್ಕೆ 16.81 ಶೇಕಡಾ ಬೆಳವಣಿಗೆಯಿಂದ 4,01,982 ರೂ. ಆಗಿದೆ. ಈ ಹಿಂದೆ 2020-21ರ ಅವಧಿಯಲ್ಲಿ ದೆಹಲಿಯ ತಲಾ ಆದಾಯ 3,44,136 ರೂ. ಆಗಿತ್ತು. ಪ್ರಸ್ತುತ ದೆಹಲಿಯ ತಲಾ ಆದಾಯವು ಎಲ್ಲಾ ರಾಜ್ಯಗಳು ಹಾಗೂ ಯುಟಿಗಳಲ್ಲಿ 3ನೇ ಸ್ಥಾನದಲ್ಲಿದೆ. * 1ನೇ ಸ್ಥಾನದಲ್ಲಿ ಗೋವಾ ಹಾಗೂ 2ನೇ ಸ್ಥಾನದಲ್ಲಿ ಸಿಕ್ಕಿಂ ರಾಜ್ಯಗಳಿವೆ. ಈ ಸಮೀಕ್ಷೆಯ ಪ್ರಕಾರ ದೆಹಲಿಯು 2021-22 ಹಣಕಾಸು ವರ್ಷದಲ್ಲಿ 10.23 ಶೇಕಡಾ GDP ಬೆಳವಣಿಗೆಯನ್ನು ದಾಖಲಿಸಿದೆ. * 2021-22 ರ ಫಲಿತಾಂಶದ ಬಜೆಟ್ ಪ್ರಕಾರ, ದೆಹಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 15 ಲಕ್ಷದಿಂದ 18 ಲಕ್ಷಕ್ಕೆ ಹೆಚ್ಚಿಗೆಯಾಗಿದೆ. ದೆಹಲಿ ಬೋರ್ಡ್ ಸ್ಕೂಲ್ ಎಜುಕೇಶನ್'ನ್ನು ದೆಹಲಿ ಸರ್ಕಾರವು ಸ್ಥಾಪಿಸಿದೆ. ಹಾಗೂ ಶಿಕ್ಷಕರ ಶಿಕ್ಷಣವನ್ನು ಸುಧಾರಿಸಲು ಅಗತ್ಯವಾಗಿರುವ ಅಗತ್ಯಗಳನ್ನು ಪೂರೈಸಲು ದೆಹಲಿ ಶಿಕ್ಷಕರ ವಿಶ್ವವಿದ್ಯಾಲಯವನ್ನು ಸಹ ಸ್ಥಾಪನೆ ಮಾಡಲಾಗಿದೆ. * ಕೋವಿಡ್ -19 ಲಸಿಕೆ ವರದಿಯ ಪ್ರಕಾರ ದೆಹಲಿಯ 100% ಜನಸಂಖ್ಯೆಯು ಕೋವಿಡ್-19 ಲಸಿಕೆಯ ಮೊದಲ ಡೋಸ್'ನ್ನು ಪಡೆದಿದೆ. COVID ಲಸಿಕೆಯ 2ನೇ ಡೋಸ್'ನ್ನು ಜನಸಂಖ್ಯೆಯ 90 ಪ್ರತಿಶತದಷ್ಟು ಜನರು ಸ್ವೀಕರಿಸಿದ್ದಾರೆ ಹಾಗೂ ದೆಹಲಿಯ 70 ಪ್ರತಿಶತ ಹದಿಹರೆಯದವರು '2' ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. * ದೆಹಲಿ ಸಾರಿಗೆ ವಲಯ ಈಗಾಗಲೇ ಭಾರತದ ಎಲೆಕ್ಟ್ರಿಕ್ ವೆಹಿಕಲ್ (EV) ರಾಜಧಾನಿಯಾಗಿದೆ, ಹಾಗೂ ನೋಂದಣಿಯಾದ ಹೊಸ EV ವಾಹನಗಳ ಶೇ. 10 ರಷ್ಟು ಮಾರ್ಕ್'ನ್ನು ದಾಟಿರುವ ದೇಶದ ಮೊದಲ ರಾಜ್ಯ ಅಥವಾ UT ಆಗಿದೆ.