Job Description: * ಪ್ರಸ್ತುತ US ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವೈದ್ಯ ಆಶಿಶ್ ಝಾ ಅವರನ್ನು ಇದೀಗ ಹೊಸ ವೈಟ್ ಹೌಸ್ ಕೋವಿಡ್ -19 ಪ್ರತಿಕ್ರಿಯೆ ಸಂಯೋಜಕರಾಗಿ ನೇಮಕ ಮಾಡಲಾಗಿದೆ. ವೈದ್ಯ ಆಶಿಶ್ ಝಾ ಅವರು ಜೆಫ್ ಝಿಂಟ್ಸ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. * ವೈದ್ಯ ಆಶಿಶ್ ಝಾ ಅವರು US ನಲ್ಲಿ ಪ್ರಮುಖ ಆರೋಗ್ಯ ತಜ್ಞರಾಗಿದ್ದಾರೆ. ಹಾಗೂ ಇವರು ಸಾಂಕ್ರಾಮಿಕ ರೋಗ ತಜ್ಞ ಹಾಗೂ ಬ್ರೌನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡೀನ್ ಆಗಿದ್ದಾರೆ. ಇವರು ಈ ಮೊದಲು ಎಬೋಲಾ ವೈರಸ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ ಇವರು ಈ ಹಿಂದೆ 2014 ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ರೋಗದ ಉಲ್ಬಣವನ್ನು ಎದುರಿಸಲು ಸಮಿತಿಯ ಸಹ-ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. * ಭಾರತೀಯ ಮೂಲದ ವೈದ್ಯ 'ಆಶಿಶ್ ಝಾ' ಅವರು ಈ ಹಿಂದೆ 1970 ರಲ್ಲಿ ಬಿಹಾರ ರಾಜ್ಯದಲ್ಲಿ ಜನಿಸಿದ್ದಾರೆ. ಇವರು 1979 ರಲ್ಲಿ ಕೆನಡಾ ಹಾಗೂ 1983 ರಲ್ಲಿ US ಗೆ ವಲಸೆ ಹೋಗಿದ್ದಾರೆ. ಇವರು 2009 ರಿಂದ 2013 ರವರೆಗೆ ಕಾರ್ಯದರ್ಶಿಯ ವಿಶೇಷ ಸಹಾಯಕರಾಗಿ ವೆಟರನ್ಸ್ ಅಫೇರ್ಸ್ ಇಲಾಖೆಗೆ ಸೇವೆ ಸಲ್ಲಿಸಿದ್ದಾರೆ.