Job Description: * ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಕರಿಗೆ ಸಹಾಯವಾಗುವಂತೆ ಶಿಕ್ಷಕರ ವರ್ಗಾವಣೆ ಹಾಗೂ ದಾಖಲೆಗಳನ್ನು ಆನ್ ಲೈನ್'ನಲ್ಲಿ ನಿರ್ವಹಿಸಲು ಇದೀಗ ಕರ್ನಾಟಕ ಶಿಕ್ಷಕ ಮಿತ್ರ ಆಯಪ್ ಬಿಡುಗಡೆಗೊಳಿಸಿದೆ. * ಶಿಕ್ಷಕ ಮಿತ್ರ ಎಂಬ ಮೊಬೈಲ್ ಅಪ್ಲಿಕೇಷನ್ ನ್ನು ಕರ್ನಾಟಕ ಶಿಕ್ಷಣ ಇಲಾಖೆಯು ಅಭಿವೃದ್ಧಿಪಡಿಸಿದೆ, ಈ ಆಪ್ ಮೂಲಕ ಶಿಕ್ಷಕರ ವರ್ಗಾವಣೆಗೆ, ಅರ್ಜಿಗಳು, ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಶಾಲೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಹೋಗುವದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಅಪ್ಲಿಕೇಷನ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. * ಶಿಕ್ಷಕರು ಈ ಶಿಕ್ಷಕ ಮಿತ್ರ ಆಯಪ್'ನ ಮೂಲಕ ರಜಾ ಅರ್ಜಿ ನಿಯಮ 32 ಹಾಗೂ ನಿಯಮ 68 ರ ಅಡಿಯ್ಲಲಿ ಶುಲ್ಕ ಭತ್ಯೆ ಮಂಜೂರಾತಿ, ಹಾಗೂ ದೈಹಿಕ ಅಂಗವಿಕಲ ಭತ್ಯೆಯ ಮಂಜೂರಾತಿ, ಇದಲ್ಲದೇ ನಿಯಮ 247A/248/252B/224A ಅಡಿಯಲ್ಲಿ ಪಿಂಚಣಿ ಪ್ರಯೋಜನಗಳಿಗೆ ಉದ್ಯೋಗಿ ಅರ್ಹತಾ ಸೇವೆ, ಮನೆ ನಿರ್ಮಾಣ ಮಾಡಲು, ಹಾಗೂ ಸ್ಥಿರ ಆಸ್ತಿಗಳನ್ನು ಖರೀದಿಸಲು ಅನುಮತಿ ಹಾಗೂ ಉದ್ಯೋಗಿ ಸಂಖ್ಯೆ - ಪಾಸ್‌ಪೋರ್ಟ್ ಮಾಡ್ಯೂಲ್‌ಗೆ ಅರ್ಜಿ ಸಲ್ಲಿಸಲು ಆಕ್ಷೇಪಣೆ ಪ್ರಮಾಣಪತ್ರ ಒಳಗೊಂಡಂತೆ ಅನೇಕ ಸೇವೆಗಳು ಶಿಕ್ಷಕ ಮಿತ್ರ ಆಯಪ್ ನಲ್ಲಿ ಲಭ್ಯವಿರಲಿವೆ ಎಂದಿದ್ದಾರೆ.