Job Description: * 2022 ರ ಮೊದಲ ಚಂಡಮಾರುತವು ಇದೇ. ಮಾರ್ಚ್. 21 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪವನ್ನು ಅಪ್ಪಳಿಸಲಿದೆ ಎಂದಿದ್ದಾರೆ. ಹವಾಮಾನ ಇಲಾಖೆಯ ಈ ಚಂಡಮಾರುತಕ್ಕೆ ಅಸನಿ ಎಂದು ಹೆಸರಿಸಿದೆ. ಈ ಸೈಕೊಲೊನ್ ಅಂಡಮಾನ್‌ಗೆ ಅಪ್ಪಳಿಸಿದ ನಂತರ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಕಡೆಗೆ ಸಾಗಲಿದೆ. * ಈ ಅಸನಿ ಚಂಡಮಾರುತವು ಇದೇ ಮಾರ್ಚ್. 21 ರಂದು ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶದಲ್ಲಿ ಹೆಚ್ಚಾಗಲಿದೆ. ಇದು ಸರಿ ಸುಮಾರು 70-80 ಕಿಮೀ ವೇಗದ ಗಾಳಿಯುಲ್ಲಿ ಗಂಟೆಗೆ 90 ಕಿ.ಮೀ. ಗೆ ಏರಿಕೆಯಾಗಲಿದೆ ಎಂದಿದ್ದಾರೆ. * ಇಂದಿನಿಂದಲೇ ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪದಲ್ಲಿನ ಪ್ರದೇಶಗಳಲ್ಲಿ ಮೀನುಗಾರಿಕೆ ಕಾರ್ಯವನ್ನು ಕೈಗೊಳ್ಳದಂತೆ ಅಲ್ಲಿನ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆಯ ಸಂದೇಶವನ್ನು ನೀಡಿದೆ. * ಪ್ರಸ್ತುತ ಈ ಉಷ್ಣವಲಯದ ಚಂಡಮಾರುತಗಳನ್ನು ಹೆಸರಿಸುವುದು ಅವಶ್ಯಕವಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ವರದಿ ಮಾಡಿದೆ. ಹಿಂದೂ ಮಹಾಸಾಗರ ಹಾಗೂ ದಕ್ಷಿಣ ಪೆಸಿಫಿಕ್ ಪ್ರದೇಶಗಳ ಉಷ್ಣವಲಯದ ಚಂಡಮಾರುತದ ಹೆಸರುಗಳನ್ನು ವರ್ಣಮಾಲೆಯ ಕ್ರಮದಲ್ಲಿ ಹೆಸರಿಸಲಾಗಿದೆ, ಶ್ರೀಲಂಕಾ ರಾಷ್ಟ್ರವು ಈ ಚಂಡಮಾರುತ್ತಕ್ಕೆ ಅಸನಿ ಎಂಬ ಹೆಸರನ್ನು ನೀಡಿದೆ. * ಭಾರತ ಹವಾಮಾನ ಇಲಾಖೆಯು ಇದೊಂದು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಸಂಸ್ಥೆಯಾಗಿದೆ. ಈ ಸಂಸ್ಥೆಯು ಹವಾಮಾನ ಮುನ್ಸೂಚನೆ ಹಾಗೂ ಭೂಕಂಪಶಾಸ್ತ್ರದ ಪ್ರಮುಖ ಸಂಸ್ಥೆಯಾಗಿದೆ. ಪ್ರಸ್ತುತ ಈ ಸಂಸ್ಥೆಯು ದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಸಂಸ್ಥೆಯ ಪ್ರಾದೇಶಿಕ ಕಚೇರಿಗಳು ಚೆನ್ನೈ, ಮುಂಬೈ, ಕೋಲ್ಕತ್ತಾ, ನಾಗ್ಪುರ, ಗುವಾಹಟಿ ಹಾಗೂ ನವದೆಹಲಿಯ ನಗರಗಲ್ಲಿವೆ.