Job Description: * ಇತ್ತೀಚಿಗೆ ವರದಿಯಾಗಿರುವ ಪ್ರಕಾರ ಶ್ರೀಲಂಕಾದಲ್ಲಿ ಮುದ್ರಣ ಕಾಗದದ ಕೊರತೆ ಉಂಟಾಗಿರುವ ಹಿನ್ನಲೆಯಿಂದ ಶಾಲಾ ಮಕ್ಕಳಿಗೆ ಪರೀಕ್ಷೆಯನ್ನು ಮುಂದೂಡಲಾಗಿದೆ, ಇದೀಗ ಶ್ರೀಲಂಕಾ ರಾಷ್ಟ್ರವು ಸುಮಾರು 2.5 ಶತಕೋಟಿ ಡಾಲರ್ ನಷ್ಟು ಸಾಲದ ನೆರವು ನೀಡಿ ಎಂದು ಚೀನಾ ದೇಶಕ್ಕೆ ಮನವಿ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. * ಇದೀಗ ದ್ವೀಪರಾಷ್ಟ್ರವಾದ ಶ್ರೀಲಂಕಾ ಹಣಕಾಸು ನೆರವು ನೀಡುವಂತೆ ಚೀನಾ ಜೊತೆ ಮಾತುಕತೆ ನಡೆಸಿದೆ ಎಂದು ಚೀನಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಶ್ರೀಲಂಕಾ ಈ ಹಿಂದೆ ಸಿಲೋನ್ ಎನ್ನಾಲಾಗುತ್ತಿತ್ತು. ಇದೀಗ ಅಧಿಕೃತವಾಗಿ ಡೆಮಾಕ್ರಟಿಕ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ಶ್ರೀಲಂಕಾ ಎನ್ನುತ್ತಾರೆ. ಇದೊಂದು ದಕ್ಷಿಣ ಏಷ್ಯಾದ ಒಂದು ದ್ವೀಪ ರಾಷ್ಟ್ರವಾಗಿದೆ. ಈ ರಾಷ್ಟ್ರವು ಹಿಂದೂ ಮಹಾಸಾಗರದಲ್ಲಿ, ನೈಋತ್ಯಕ್ಕೆ ಬಂಗಾಳ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರದ ಆಗ್ನೇಯದಲ್ಲಿದೆ. ಈ ರಾಷ್ಟ್ರವು ಭಾರತೀಯ ಉಪಖಂಡದಿಂದ ಮನ್ನಾರ್ ಕೊಲ್ಲಿ ಹಾಗೂ ಪಾಕ್ ಜಲಸಂಧಿಯಿಂದ ಬೇರ್ಪಟ್ಟಿರುವ ರಾಷ್ಟ್ರವಾಗಿದೆ. * ಶ್ರೀಲಂಕಾ ದೇಶವು ಭಾರತ ಹಾಗೂ ಮಾಲ್ಡೀವ್ಸ್‌ ದೇಶಗಳ ಜೊತೆಗೆ ಕಡಲ ಗಡಿಯನ್ನು ಹೊಂದಿದೆ. ಹಾಗೂ ಇದು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಈ ಹಿಂದೆ 20ನೇ ಶತಮಾನದಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ಚಳುವಳಿ ಆರಂಭವಾಯಿತು ಹಾಗೂ 1948 ರಲ್ಲಿ ಸಿಲೋನ್ ಒಂದು ಪ್ರಭುತ್ವವಾಯಿತು ರಾಷ್ಟ್ರವಾಯಿತು. ಮತ್ತೇ 1972 ರಲ್ಲಿ ಶ್ರೀಲಂಕಾ ಎಂಬ ಹೆಸರಿನ ಗಣರಾಜ್ಯವು ಪ್ರಭುತ್ವದ ಉತ್ತರಾಧಿಕಾರಿಯನ್ನು ಪಡೆದುಕೊಂಡಿತು. * ಈ ದ್ವೀಪ ರಾಷ್ಟ್ರವು ಆಧುನಿಕ ಅಂತರರಾಷ್ಟ್ರೀಯ ಗುಂಪುಗಳ ಜೊತೆಗೆ ಹೊಂದಿಕೊಂಡಿರುವ ಇತಿಹಾಸವನ್ನು ಒಳಗೊಂಡಿದೆ. ಇದೊಂದು ಸಾರ್ಕ್‌ನ ಸ್ಥಾಪಕ ಸದಸ್ಯ ಹಾಗೂ ವಿಶ್ವಸಂಸ್ಥೆ, ಕಾಮನ್‌ವೆಲ್ತ್ ಆಫ್ ನೇಷನ್ಸ್, G77 ಹಾಗೂ ಅಲಿಪ್ತ ಚಳವಳಿಯ ಸದಸ್ಯ ರಾಷ್ಟ್ರವಾಗಿದೆ. ಪ್ರಸ್ತುತ ದಕ್ಷಿಣ ಏಷ್ಯಾದಲ್ಲಿ 2 ನೇ ಅತಿ ಹೆಚ್ಚು ತಲಾ ಆದಾಯವನ್ನು ಹೊಂದಿರುವ ರಾಷ್ಟ್ರ ಶ್ರೀಲಂಕಾ.