Job Description: * ಇತ್ತೀಚಿಗೆ ಆಸ್ಟ್ರೇಲಿಯಾ ದೇಶದಿಂದ ಭಾರತಕ್ಕೆ ಸುಮಾರು 29 ಪ್ರಾಚೀನ ವಸ್ತುಗಳು ಹಿಂದಿರುಗಿವೆ ಇದಕ್ಕೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ವರದಿ ಮಾಡಿದೆ. * ಭಾರತಕ್ಕೆ ಹಿಂದಿರುಗಿರುವ ಪ್ರಾಚೀನ ವಸ್ತುಗಳನ್ನು '6' ವಿಭಾಗಗಳಾಗಿ ವಿಂಗಡಿಸಲಾಗಿದೆ. - ಶಿವ ದೇವರು - ಶಕ್ತಿ ಪೂಜೆ - ಭಗವಾನ್ ವಿಷ್ಣು - ಜೈನ ಸಂಪ್ರದಾಯ - ವರ್ಣಚಿತ್ರಗಳು - ಅಲಂಕಾರಿಕ ವಸ್ತುಗಳು. * ಬೇರೆ ಬೇರೆ ಶತಮಾನಕ್ಕೆ ಸೇರಿರುವ ಪ್ರಾಚೀನ ವಸ್ತುಗಳನ್ನು ಇದರಲ್ಲಿವೆ ಎಂದು ತಿಳಿಸಿದ್ದಾರೆ. ಅವುಗಳಲ್ಲಿ ಮರಳುಗಲ್ಲು, ಅಮೃತಶಿಲೆ, ಕಂಚು, ಕಾಗದ, ಹಿತ್ತಾಳೆಗಳಂತಹ ಶಿಲ್ಪ ಮತ್ತು ವರ್ಣಶಿಲ್ಪಗಳಿವೆ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸೇರಿವೆ ಎನ್ನಲಾಗಿದೆ.