Job Description: * ಗೋವಾ ರಾಜ್ಯದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಗೋವಾ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಆಯ್ಕೆ ಮಾಡಿದೆ. "ಪ್ರಮೋದ್ ಸಾವಂತ್" ಅವರು ಸತತವಾಗಿ 2 ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ. * ಗೋವಾ ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಬಿಜೆಪಿಯ ಕೇಂದ್ರ ವೀಕ್ಷಕರಾದ ನರೇಂದ್ರ ಸಿಂಗ್ ತೋಮರ್ ಹಾಗೂ ಎಲ್ ಮುರುಗನ್ ಅವರು ಪಾಲ್ಗೊಂಡಿದ್ದರು. * ಪ್ರಸ್ತುತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆಯಾಗಿ 40 ಸ್ಥಾನಗಳಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸಿದೆ. ಪ್ರಸ್ತುತ ರಾಜ್ಯದಲ್ಲಿ ಸರ್ಕಾರವನ್ನು ರಚಿಸಲು 21 ಸ್ಥಾನಗಳ ಅಗತ್ಯವಿತ್ತು, ಇದಕ್ಕೆ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ ಇಬ್ಬರು ಶಾಸಕರು ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲವನ್ನು ನೀಡಿದ್ದಾರೆ, ಈ ಹಿನ್ನಲೆಯಿಂದಾಗಿ ಬಿಜೆಪಿ ಪಕ್ಷವು ಗೋವಾ ರಾಜ್ಯದಲ್ಲಿ ಸರ್ಕಾರವನ್ನು ರಚಿಸಲು ಸಹಕಾರಿಯಾಗಿದೆ. * ಗೋವಾ ಭಾರತದ ನೈಋತ್ಯ ಕರಾವಳಿಯಲ್ಲಿರುವ ರಾಜ್ಯವಾಗಿದೆ, ಈ ರಾಜ್ಯವು ಉತ್ತರಕ್ಕೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಜೊತೆ ಗಡಿಯನ್ನು ಹಂಚಿಕೊಂಡಿದೆ. ಈ ರಾಜ್ಯವು ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ಚಿಕ್ಕ ರಾಜ್ಯವಾಗಿದೆ ಹಾಗೂ ಜನಸಂಖ್ಯೆಯಲ್ಲಿ 4 ನೇ ಚಿಕ್ಕದಾಗಿದೆ. ಪ್ರಸ್ತುತ ಗೋವಾ ರಾಜ್ಯವು ಎಲ್ಲಾ ಭಾರತೀಯ ರಾಜ್ಯಗಳಿಗಿಂತ ಅತಿ ಹೆಚ್ಚು ತಲಾವಾರು GDP ಹೊಂದಿದೆ. ಇದರ ಜೊತೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ರಾಜ್ಯವು ಭಾರತೀಯ ರಾಜ್ಯಗಳಲ್ಲಿ 3 ನೇ ಅತ್ಯುತ್ತಮ ಶ್ರೇಯಾಂಕವನ್ನು ಪಡೆದಿದೆ. * ಗೋವಾ ರಾಜ್ಯವು ಪಣಜಿ ಎಂಬ ರಾಜಧಾನಿಯನ್ನು ಹೊಂದಿದೆ, ಪ್ರಸ್ತುತ ರಾಜ್ಯದ ವಾಸ್ಕೋ ಡ ಗಾಮಾ ನಗರವು ರಾಜ್ಯದ ದೊಡ್ಡ ನಗರವಾಗಿದೆ. ಈ ಹಿಂದೆ 16 ನೇ ಶತಮಾನದಲ್ಲಿ ಉಪಖಂಡಕ್ಕೆ ವ್ಯಾಪಾರಿಗಳಾಗಿ ಮೊದಲ ಬಾರಿಗೆ ಪ್ರಯಾಣವನ್ನು ಬೆಳೆಸಿದರು ಹಾಗೂ ಅದನ್ನು ತಮ್ಮ ವಶಕ್ಕೆ ಪಡೆದುಕೊಂಡರು, ನಂತರದ ದಿನಗಳಲ್ಲಿ ಗೋವಾ ಪೋರ್ಚುಗೀಸ್ ಸಾಮ್ರಾಜ್ಯದ ಪ್ರದೇಶವಾಯಿತು, ಆಗ ಇದನ್ನು ಪೋರ್ಚುಗೀಸ್ ಇಂಡಿಯಾ ಎನ್ನಲಾಗುತ್ತಿತ್ತು.