Job Description: * ಪ್ರಸ್ತುತ ದೇಶದ 2 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ "ಪದ್ಮ ವಿಭೂಷಣ" ಪ್ರಶಸ್ತಿಯನ್ನು ಈ ಹಿಂದೆ ಡಿಸೆಂಬರ್'ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿರುವ ಭಾರತೀಯ ಮೊಟ್ಟ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಅವರಿಗೆ ಮರಣೋತ್ತರವಾಗಿ ನೀಡಲಾಗಿದೆ. * ಗೃಹ ಸಚಿವಾಲಯವು 73 ನೇ ಗಣರಾಜ್ಯೋತ್ಸವದ ಅಂಗವಾಗಿ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. * ಜನರಲ್ ಬಿಪಿನ್ ರಾವತ್ ಅವರ ಪುತ್ರಿ ಕೃತಿಕಾ ರಾವತ್ ಹಾಗೂ ತಾರಿಣಿ ರಾವತ್ ಅವರಿಗೆ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೀಡಿದ್ದಾರೆ. * ಜನರಲ್ ಬಿಪಿನ್ ರಾವತ್ ಅವರು ಭಾರತದ ದೀರ್ಘಕಾಲ ಸೇವೆ ಸಲ್ಲಿಸಿರುವ '4' ಸ್ಟಾರ್ ಜನರಲ್ ಇವರಾಗಿದ್ದರು. * ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಹಾಗೂ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷ ಸೈರಸ್ ಪೂನಾವಾಲಾ ಅವರು ಕೂಡ ಈ "ಪದ್ಮ ವಿಭೂಷಣ" ಪ್ರಶಸ್ತಿಗೆ ಪಾತ್ರರಾಗಿದ್ದಾರೆ. * ಪದ್ಮವಿಭೂಷಣ ಭಾರತ ರತ್ನದ ನಂತರ ಭಾರತ ಗಣರಾಜ್ಯದ 2 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಈ ಹಿಂದೆ 1954 ರ ಜನವರಿ. 02 ರಂದು ಸ್ಥಾಪಿಸಲಾಗಿದೆ. ಪ್ರಸ್ತುತ ಈ ಪ್ರಶಸ್ತಿಯನ್ನು 'ಅಸಾಧಾರಣ ಹಾಗೂ ವಿಶಿಷ್ಟ ಸೇವೆ'ಗಳಿಗಾಗಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಗಳಿಗೆ ಯಾವುದೇ ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದ ಎಲ್ಲಾ ವ್ಯಕ್ತಿಗಳು ಅರ್ಹರಾಗಿರುತ್ತಾರೆ. ಆದರೆ ವೈದ್ಯರು ಹಾಗೂ ವಿಜ್ಞಾನಿಗಳನ್ನು ಹೊರತುಪಡಿಸಿ PSU ಗಳಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರು ಈ ಪ್ರಶಸ್ತಿಗಳಿಗೆ ಅರ್ಹರಲ್ಲ. 2020 ರ ವೇಳೆಗೆ 314 ವ್ಯಕ್ತಿಗಳಿಗೆ ಈ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. * ಪ್ರತಿ ವರ್ಷವು ಮೇ. 1 ಹಾಗೂ ಸೆಪ್ಟೆಂಬರ್. 15 ರಂದು ಈ ಪ್ರಶಸ್ತಿಗಾಗಿ ಶಿಫಾರಸುಗಳನ್ನು ಪದ್ಮ ಪ್ರಶಸ್ತಿಗಳ ಸಮಿತಿಗೆ ಸಲ್ಲಿಸಲಾಗುತ್ತದೆ, ಈ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಗಣರಾಜ್ಯೋತ್ಸವ ದಿನದಂದು ಪ್ರಕಟಿಸಲಾಗುತ್ತದೆ.