Job Description: * ಈ ಹಿಂದೆ 2006 ರಿಂದ ವಾರ್ಷಿಕವಾಗಿ ಮಾರ್ಚ್. 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಣೆ ಮಾಡಲಾಗುತ್ತದೆ. * ಈ ದಿನದಂದು ಡೌನ್ ಸಿಂಡ್ರೋಮ್ ನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ವಾರ್ಷಿಕವಾಗಿ ಆಚರಣೆ ಮಾಡಲಾಗುತ್ತದೆ. ಈ ಡೌನ್ ಸಿಂಡ್ರೋಮ್ ಶಿಶುಗಳು ಹೆಚ್ಚುವರಿ ಕ್ರೋಮೋಸೋಮ್'ನ್ನು ಹೊಂದಿರುತ್ತವೆ, ಇದು ದೇಹ ಹಾಗೂ ಮಗುವಿನ ಮೆದುಳು ಹೇಗೆ ಬೆಳವಣಿಗೆಯಾಗುತ್ತದೆ ಎಂಬುದನ್ನು ಬದಲಾವಣೆ ಮಾಡುತ್ತದೆ. ಪ್ರಸ್ತುತ ಕ್ರೋಮೋಸೋಮ್ 21 ಎಂದು ಕರೆಯುವ ಡೌನ್ ಸಿಂಡ್ರೋಮ್ ಒಳಗೊಂಡಿರುವ ಶಿಶುಗಳ ದೇಹದಲ್ಲಿ ಹೆಚ್ಚುವರಿ ಕ್ರೋಮೋಸೋಮ್ ಇರಲಿದೆ ಎಂದಿದ್ದಾರೆ. * ಈ ಡೌನ್ ಸಿಂಡ್ರೋಮ್ ಹೊಂದಿರುವ ಜನರು ಸಾಮಾನ್ಯವಾಗಿ ಕಡಿಮೆ ಐಕ್ಯೂ(IQ) ಹೊಂದಿರುತ್ತಾರೆ ಹಾಗೂ ಬೇರೆ ಮಕ್ಕಳಿಗೆ ಹೋಲಿಸಿ ನೋಡಿದರೆ ನಿಧಾನವಾಗಿ ಮಾತನಾಡುತ್ತಾರೆ. * ಈ ಹಿಂದೆ 2006 ರಲ್ಲಿ ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಮೊದಲ ಬಾರಿಗೆ ಆಚರಣೆ ಮಾಡಲಾಗಿದೆ. ಅದೇ ವರ್ಷದಲ್ಲಿ ಬ್ರೆಜಿಲಿಯನ್ ಫೆಡರೇಶನ್ ಆಫ್ ಅಸೋಸಿಯೇಷನ್ಸ್ ಆಫ್ ಡೌನ್ ಸಿಂಡ್ರೋಮ್ ಇದು ಡೌನ್ ಸಿಂಡ್ರೋಮ್ ಇಂಟರ್ನ್ಯಾಷನಲ್ ಜೊತೆಗೆ ಈ ರೋಗದ ಲಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನವನ್ನು ಆರಂಭಿಸಿದೆ. * 2011 ರಲ್ಲಿ UN ಜನರಲ್ ಅಸೆಂಬ್ಲಿಯು ವಾರ್ಷಿಕವಾಗಿ ಮಾರ್ಚ್. 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನದ ಆಚರಣೆಯ ನಿರ್ಣಯಕ್ಕೆ ಅಂಗೀಕರಿಸಿದೆ. ಇದರ ಹಿನ್ನಲೆಯಿಂದಾಗಿ UNGA ಈ ದಿನವನ್ನು 2012 ರಿಂದ ವಾರ್ಷಿಕವಾಗಿ ಆಚರಣೆ ಮಾಡಲು ತೀರ್ಮಾನವನ್ನು ಕೈಗೊಂಡಿದೆ.