Job Description: * ಪ್ರಸ್ತುತ 15 ನೇ ತರಗತಿಯ ಸಂಗೀತ ವಾದ್ಯಗಳ ವಿಭಾಗದಲ್ಲಿ ನರಸಿಂಗಪೇಟೆ ನಾಗಸ್ವರಕ್ಕೆ ಭೌಗೋಳಿಕ ಸೂಚಕ(GI) ಟ್ಯಾಗ್ ನೀಡಲಾಗಿದೆ. * ನರಸಿಂಗಪೆಟ್ಟೈ ನಾಗಸ್ವರಂ ಎನ್ನುವದು ತಮಿಳುನಾಡಿನ ಕುಂಭಕೋಣಂ ಹಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗಿರುವ ಶಾಸ್ತ್ರೀಯ ಗಾಳಿ ಸಂಗೀತ ವಾದ್ಯವಾಗಿದೆ. ಇತ್ತೀಚಿಗೆ ಇದಕ್ಕೆ ತಂಜಾವೂರ್ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ವರ್ಕರ್ಸ್ ಕೋ-ಆಪರೇಟಿವ್ ಕಾಟೇಜ್ ಇಂಡಸ್ಟ್ರಿಯಲ್ ಸೊಸೈಟಿ ಲಿಮಿಟೆಡ್ ಪರವಾಗಿ, ಉತ್ಪನ್ನಗಳ ಜಿಐ(GI) ನೋಂದಣಿಗಾಗಿ ತಮಿಳುನಾಡು ನೋಡಲ್ ಅಧಿಕಾರಿಯಿಂದ ಜಿಐ ಟ್ಯಾಗ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. * ಈ ಶಾಸ್ತ್ರೀಯ ಗಾಳಿ ಸಂಗೀತ ವಾದ್ಯವನ್ನು ನರಸಿಂಗನಪೇಟೆ ಗ್ರಾಮದ ಕುಶಲಕರ್ಮಿಗಳು ತಮ್ಮ ಪೂರ್ವಜರಿಂದ ಈ ಮರದ ಉಪಕರಣಗಳನ್ನು ತಯಾರಿಸುವ ಕೌಶಲ್ಯವನ್ನು ಕಲಿತುಕೊಂಡು ಅವುಗಳನ್ನು ಸಿದ್ದಪಡಿಸುತ್ತಿದ್ದಾರೆ. * ನಾಗಸ್ವರ ಈ ಸಂಗೀತ ವಾದ್ಯವು ಸಿಲಿಂಡರಾಕಾರದ ಆಕಾರವನ್ನು ಹೊಂದಿದೆ ಹಾಗೂ ಕೆಳಭಾಗದಲ್ಲಿ ಗಂಟೆಯ ಆಕಾರವನ್ನು ಕೂಡ ಒಳಗೊಂಡಿದೆ. ಈ ನರಸಿಂಗಪೆಟ್ಟೈ ನಾಗಸ್ವರಂನ ಬಹುಪಾಲು ಆಚಾ ಅಥವಾ ಹಾರ್ಡ್ವಿಕಿಯಾ ಬಿನಾಟಾ ಮರವನ್ನು ಬಳಸಿಕೊಂಡು ಸಿದ್ಧಪಡಿಸಲಾಗುತ್ತದೆ. ಹಾಗೆಯೇ ಕುಶಲಕರ್ಮಿಗಳು ಹಬ್ಬಗಳು, ಮದುವೆಗಳು, ಜಾತ್ರೆಗಳು ಇನ್ನಿತರ ಕಾರ್ಯಕ್ರಮಗಳಲ್ಲಿ ನುಡಿಸುವ ನಾಗಸ್ವರಂಗಳನ್ನು ಸಿದ್ದಪಡಿಸಲು ಬಳಸಲಾಗುತ್ತದೆ.