Job Description: * ಇದೇ ತಿಂಗಳಿನಲ್ಲಿ ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ (BBNL) ಹಾಗೂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. * ಸರ್ಕಾರವು ಈಗಾಗಲೇ BBNL ಹಾಗೂ BSNL ನ್ನು ವಿಲೀನಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ ಹಾಗೂ ಈ ವಿಲೀನ ಪ್ರಕ್ರಿಯೆಯ ಇದೇ ಮಾರ್ಚ್. 31 ರ ವೇಳೆಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಇದೀಗ ಸರ್ಕಾರವು ಸರಿ ಸುಮಾರು 1.6 ಟ್ರಿಲಿಯನ್ ರೂ. ಹಣವನ್ನು ನೀಡಲು ಯೋಜಿಸಿದೆ, ಈ ಹಣದಲ್ಲಿ ಸುಮಾರು 36,260 ಕೋಟಿ ರೂ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ BSNL ಗೆ ನಗದು ಬೆಂಬಲವನ್ನು ನೀಡುತ್ತದೆ. * BBNL ಹಾಗೂ BSNL ಸಂಸ್ಥೆಗಳು ವಿಲೀನಗೊಂಡ ಬಳಿಕ ನಂತರದಲ್ಲಿ 860,000 ಕಿ.ಮೀ. ಆಪ್ಟಿಕ್ ಫೈಬರ್, BBNL ನ 560,000 ಕಿ.ಮೀ. ಜೊತೆಗೆ ಸೇರಿ 1.42-ಮಿಲಿಯನ್ ಕಿ.ಲೋ. ಇಂಟಿಗ್ರೇಟೆಡ್ ಫೈಬರ್ ನೆಟ್‌ವರ್ಕ್ ನ್ನು ನಿರ್ಮಿಸಲಿದೆ. ಪ್ರಸ್ತುತ ದೇಶಾದ್ಯಂತ BSNL ನ ಮಾರುಕಟ್ಟೆಯನ್ನು ಸಂಯೋಜಿಸಿದಾಗ, ಗ್ರಾಮೀಣ ಪ್ರದೇಶಗಳಿಗೆ ಕೊನೆಯ ಮೈಲಿಯವರೆಗೂ ಸಂಪರ್ಕವನ್ನು ಕಲ್ಪಿಸಲಿದೆ. * BBNL ಇದೊಂದು ವಿಶೇಷ ಉದ್ದೇಶದ ವಾಹನವಾಗಿದೆ, ಪ್ರಸ್ತುತ ಇದು ಸಂವಹನ ಸಚಿವಾಲಯದ ವ್ಯಾಪ್ತಿಯ ಅಡಿಯಲ್ಲಿ ಬರಲಿದೆ ಹಾಗೂ 2012 ರಲ್ಲಿ ಇದನ್ನು ಸಾರ್ವಜನಿಕ ವಲಯದ ಘಟಕವಾಗಿ ಸಂಯೋಜಿಸಲಾಗಿದೆ. SPV ಯು ಯೂನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್ (USOF)ನ ವತಿಯಿಂದ ಧನಸಹಾಯ ಪಡೆದುಕೊಂಡಿದೆ. ಹಾಗೆ ಎಲ್ಲಾ ಟೆಲಿಕಾಂ ಪರವಾನಗಿದಾರರು ಪಾವತಿಸಬೇಕಾದ ಯುನಿವರ್ಸಲ್ ಆಕ್ಸೆಸ್ ಲೆವಿ (UAL)ನ ವತಿಯಿಂದ ಹಣಕಾಸು ಪಡೆಯುತ್ತದೆ. ಈ ಹಿಂದೆ 2002 ರ ಏಪ್ರಿಲ್. 1 ರಂದು ಜಾರಿಗೆ ಬಂದಿದೆ ಹಾಗೂ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು ತಮ್ಮ ಆದಾಯದ ಒಂದು ಭಾಗವನ್ನು USOF ಗೆ ಪಾವತಿಸುವ ಅಗತ್ಯವಿದೆ ಎಂದು ತಿಳಿಸಲಾಗಿತ್ತು. * ಪ್ರಸ್ತುತ BBNL ಹಾಗೂ BSNL ವಿಲೀನದೊಂದಿಗೆ, ಸರಿ ಸುಮಾರು 60,000 ಕೋಟಿ ರೂ. ನಿಧಿಯನ್ನು BSNL ಗೆ ವರ್ಗಾಯಿಸುವ ಸಾಧ್ಯತೆಗಳಿವೆ, ಹಾಗೂ ಈ ಸಂಸ್ಥೆಗಳ ಆರ್ಥಿಕ ತೊಂದರೆಗಳ ಸಂದರ್ಭದಲ್ಲಿ ಸಹಾಯ ಮಾಡಲಿದೆ ಎಂದಿದ್ದಾರೆ.