Job Description: * ಪ್ರಸ್ತುತ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಹರಿಯುವ 'ಯಮುನಾ' ನದಿಯನ್ನು ಪೂರ್ತಿಯಾಗಿ ಶುದ್ಧೀಕರಿಸಲಾಗುತ್ತದೆ. ಅಷ್ಟೇ ಅಲ್ಲದೇ ಅತಿ ಶೀಘ್ರದಲ್ಲಿಯೇ ಯಮುನಾ ನದಿ ನೀರುನ್ನು ಸ್ನಾನ ಮಾಡಲು ಯೋಗ್ಯವಾಗುವಂತೆ ಮಾಡಲಾಗುತ್ತದೆ. ಹಾಗೂ 2023 ರ ಡಿಸೆಂಬರ್ ವೇಳೆಗೆ ಮೀನಿನ ಸಂತಾನೋತ್ಪತ್ತಿಯನ್ನುಪ್ರಾರಂಭಿಸಲಾಗುವದು ಎಂದು ದೆಹಲಿ ಜಲ ಸಂಪನ್ಮೂಲ ಸಚಿವ ಸತ್ಯೇಂದರ್ ಜೈನ್ ಅವರು ತಿಳಿಸಿದ್ದಾರೆ. * ಇದೀಗ ದೆಹಲಿಯಲ್ಲಿ ಮುಂದಿನ 15 ತಿಂಗಳಲ್ಲಿ ಎಲ್ಲಾ ಪ್ರದೇಶಗಳನ್ನು ಚರಂಡಿಗೆ ಸಂಪರ್ಕ ವ್ಯವಸ್ಥೆಯಡಿಯಲ್ಲಿ ತರಲಾಗುವದು. 2025ರ ಬದಲಾಗಿ 2023ರ ಡಿಸೆಂಬರ್'ನ ವೇಳೆಗೆ ಯಮುನಾ ನದಿಯನ್ನು ಶುದ್ಧೀಕರಿಸಲಾಗುತ್ತದೆ. ಹಾಗೂ ಅಲ್ಲಿನ ಎಲ್ಲಾ ಚರಂಡಿಗಳನ್ನು ಪೂರ್ತಿಯಾಗಿ ಶುದ್ಧ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಮುಂಬರುವ 5-10 ವರ್ಷಗಳಲ್ಲಿ ದೆಹಲಿಯಲ್ಲಿನ ಅಂತರ್ಜಲವನ್ನು 50 ವರ್ಷಗಳ ಹಿಂದಿನ ಮಟ್ಟಕ್ಕೆ ತರಲು ಪ್ರಯ್ನತ್ನಿಸಲಾಗುತ್ತದೆ ಎಂದಿದ್ದಾರೆ. * ಯಮುನಾ ನದಿಯನ್ನು ಜಮುನಾ ಎಂದು ಸಹ ಕರೆಯಲಾಗುತ್ತದೆ, ಈ ನದಿಯು ಗಂಗಾನದಿಯ ವಿಸರ್ಜನೆಯ ಮೂಲಕ 2 ನೇ ಅತಿದೊಡ್ಡ ಉಪನದಿಯಾಗಿದೆ ಹಾಗೂ ಭಾರತದಲ್ಲಿನ ಅತಿ ಉದ್ದದ ಉಪನದಿಯಾಗಿದೆ. ಗಂಗೆ ನದಿಯನ್ನು ಮಾತೆಯ ರೀತಿಯಲ್ಲಿ ಪೂಜಿಸಲಾಗುತ್ತದೆ ಹಾಗೆಯೇ ಯಮುನಾ ನದಿಯನ್ನು ದೇವತೆ ರೂಪದಲ್ಲಿ ಕಂಡು ಪೂಜಿಸಲಾಗುತ್ತದೆ. * ಈ ಯಮುನಾ ನದಿಯು ಹರಿಯಾಣ ಹಾಗೂ ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿನಗರಗಳ ಮೂಲಕ ಹಾದುಹೋಗುತ್ತದೆ. ಹಾಗೂ ಇದು ತನ್ನದೇ ಆದ ದೊಡ್ಡ ಜಲಾನಯನ ಪ್ರದೇಶವನ್ನು ಹೊಂದಿರುವ ಉದ್ದವಾದ ನದಿಯಾಗಿದೆ. ಸರಿ ಸುಮಾರು 57 ಮಿಲಿಯನ್ ಜನರು ಯಮುನಾ ನದಿಯ ನೀರನ್ನು ಅವಲಂಬಿಸಿದ್ದಾರೆ, ಅಷ್ಟೇ ಅಲ್ಲದೇ ದೆಹಲಿಯ ನೀರಿನ ಸರಬರಾಜಿನ 70 ಪ್ರತಿಶತಕ್ಕಿಂತ ಹೆಚ್ಚಿಗೆ ಈ ನದಿಯು ಒಳಗೊಂಡಿದೆ.