Job Description: * ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2022-23 ನೇ ಸಾಲಿಗೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಅನುಮೋದಿಸಿದೆ ಎಂದು ಅಧಿಕೃತ ಹೇಳಿಕೆ ನೀಡಿದೆ. ಕೃಷಿ ವೆಚ್ಚಗಳು ಹಾಗೂ ಬೆಲೆಗಳ ಆಯೋಗದ ಶಿಫಾರಸುಗಳನ್ನು ಆಧರಿಸಿ ಅನುಮೋದನೆಯನ್ನ ನೀಡಲಾಗಿದೆ. * 2022-23ನೇ ಸಾಲಿಗೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್'ಗೆ 4,750 ರೂ. ಎಂದು ನಿಗದಿಪಡಿಸಲಾಗಿದೆ, ಹಿಂದಿನ ವರ್ಷಕ್ಕಿಂತ ಹೋಲಿಸಿ ನೋಡಿದರೆ 250 ರೂ. ಹೆಚ್ಚಳವಾಗಿದೆ. ಇದರಿಂದಾಗಿ ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 60.5% ನಷ್ಟು ಆದಾಯವನ್ನ ಖಚಿತಪಡಿಸುತ್ತದೆ' ಎಂದು ಸರ್ಕಾರವು ಮಾಹಿತಿ ನೀಡಿದೆ. * ಸೆಣಬಿನ ಬೆಳೆಗಾರರಿಗೆ ಉತ್ತಮ ಲಾಭದ ಮಾರ್ಜಿನ್ ಗೆ ಕನಿಷ್ಠ 50% ನ್ನು ಖಾತರಿಪಡಿಸುತ್ತದೆ. ಹಾಗೂ ಗುಣಮಟ್ಟದ ಸೆಣಬಿನ ನಾರನ್ನ ಉತ್ತೇಜಿಸಲಾಗಿದೆ. ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಸೆಣಬಿನ ಕಾರ್ಪೊರೇಷನ್ ಆಫ್ ಇಂಡಿಯಾ (JCI) ಬೆಲೆ ಬೆಂಬಲ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಹಾಗೆಯೇ ಇಂತಹ ಕಾರ್ಯಾಚರಣೆಗಳಲ್ಲಿ ಉಂಟಾಗುವ ನಷ್ಟಗಳನ್ನ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. * ಸೆಣಬಿನ ಅಥವಾ ಕೈಗಾರಿಕಾ ಸೆಣಬಿನ ಸಸ್ಯಶಾಸ್ತ್ರೀಯ ವರ್ಗದ ಕ್ಯಾನಬಿಸ್ ಸಟಿವಾ ತಳಿಗಳನ್ನು ವಿಶೇಷವಾಗಿ ಕೈಗಾರಿಕಾ ಅಥವಾ ಔಷಧೀಯಾಗಿ ಬಳಕೆಮಾಡಿಕೊಳ್ಳಲು ಬೆಳೆಸಲಾಗುತ್ತದೆ. ಬಿದಿರಿನ ಜೊತೆಗೆ ಸೆಣಬ ಭೂಮಿಯ ಮೇಲೆ ವೇಗವಾಗಿ ಬೆಳೆಯುತ್ತಿರುವ ಸಸ್ಯಗಳಲ್ಲಿ ಒಂದಾಗಿದೆ. ಸೆಣಬನ್ನು ಕಾಗದ, ಹಗ್ಗ, ಜವಳಿ, ಬಟ್ಟೆ, ಜೈವಿಕ ವಿಘಟನೀಯ ಪ್ಲಾಸ್ಟಿಕ್‌ಗಳು, ಬಣ್ಣ, ನಿರೋಧನ, ಜೈವಿಕ ಇಂಧನ, ಆಹಾರ ಹಾಗೂ ಪಶು ಆಹಾರ ಸೇರಿದಂತೆ ವಿವಿಧ ವಾಣಿಜ್ಯ ವಸ್ತುಗಳಾಗಿ ಬಳಸಬಹುದಾಗಿದೆ. * ಅನೇಕ ಸರ್ಕಾರಗಳು THC ಯ ಸಾಂದ್ರತೆಯನ್ನು ನಿಯಂತ್ರಿಸುತ್ತವೆ ಹಾಗೂ ವಿಶೇಷವಾಗಿ ಕಡಿಮೆ THC ಅಂಶವನ್ನು ಹೊಂದಿರುವ ಸೆಣಬನ್ನು ಮಾತ್ರ ವಾಣಿಜ್ಯ ಉತ್ಪಾದನೆಗೆ ಅನುಮತಿಯನ್ನು ನೀಡಿವೆ.