Job Description: * ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾದಿಯಲ್ಲಿ ಭಾರತದ ಸಾರ್ವಜನಿಕ ಪ್ರಸಾರಕ ಪ್ರಸಾರ ಭಾರತಿಯು ಸಹಕಾರವನ್ನು ಮತ್ತಷ್ಟು ವೃದಿಸಲು 2022 ರ ಮಾರ್ಚ್. 21 ರಂದು ಆಸ್ಟ್ರೇಲಿಯಾದ ಸಾರ್ವಜನಿಕ ಸೇವಾ ಪ್ರಸಾರಕ ವಿಶೇಷ ಬ್ರಾಡ್‌ಕಾಸ್ಟಿಂಗ್ ಸೇವೆ (SBS)ಯ ಜೊತೆಗಿನ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. * ಇದೀಗ ಆಸ್ಟ್ರೇಲಿಯಾದ ಭಾರತೀಯ ಡಯಾಸ್ಪೊರಾದಲ್ಲಿ ಡಿಡಿ ನ್ಯೂಸ್, ಡಿಡಿ ಇಂಡಿಯಾ ಹಾಗೂ ಡಿಡಿ ನ್ಯೂಸ್‌ನ ಬಹು ಭಾಷಾ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಲಿದೆ. ಈ ತಿಳಿವಳಿಕೆ ಒಪ್ಪಂದದ ಪ್ರಕಾರ ಅಲ್ಲಿನ ಪ್ರಸಾರಕರು ಬಹು ಪ್ರಕಾರಗಳಲ್ಲಿ ವ್ಯಾಪಿಸಿರುವ ಕಾರ್ಯಕ್ರಮಗಳ ಸಹ-ನಿರ್ಮಾಣ ಹಾಗೂ ಜಂಟಿ ಪ್ರಸಾರದಲ್ಲಿ ಅವಕಾಶಗಳನ್ನು ಅನ್ವೇಷಿಸುತ್ತಾರೆ. ಹಾಗೂ ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ಮನರಂಜನೆ, ಕ್ರೀಡೆ, ಸುದ್ದಿ, ಪ್ರಯಾಣ, ಸಂಗೀತದ ಜೊತೆಗೆ ಕಲೆಗಳ ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. * ಸಾರ್ವಜನಿಕ ಪ್ರಸಾರಕರು ತಾಂತ್ರಿಕ ಜ್ಞಾನ ಹಾಗೂ ಕಾರ್ಯಕ್ರಮ ಉತ್ಪಾದನೆ ಹೀಗೆ ಇನ್ನು ಹಲವು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ತರಬೇತಿಯನ್ನು ಆಯೋಜಿಸುತ್ತಾರೆ. ಅವರೆಲ್ಲರೂ ಪರಸ್ಪರ ಮಾಹಿತಿ ಹಾಗೂ ಇನ್ನಿತರ ಸಾಂಸ್ಥಿಕ, ತಾಂತ್ರಿಕ ನೆರವು ಪೂರೈಕೆಗಳಂತಹ ವಿವಿಧ ಸೌಲಭ್ಯಗಳು ಕಲ್ಪಿಸುತ್ತಾರೆ. * ಪ್ರಸ್ತುತ ಕಾರ್ಯಕ್ರಮಗಳ ವಿನಿಮಯ ವಲಯದಲ್ಲಿ ಡಿಡಿ ಇಂಡಿಯಾ, ಡಿಡಿ ನ್ಯೂಸ್ ಹಾಗೂ ಡಿಡಿ ಸಹ್ಯಾದ್ರಿಗಾಗಿ ಆಸ್ಟ್ರೇಲಿಯಾದಲ್ಲಿ ಟಿವಿ ಚಾನೆಲ್‌ಗಳಲ್ಲಿ ದೈನಂದಿನ ಸ್ಲಾಟ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರಿಂಗ್ಲಾ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.