Job Description: * ಪ್ರಸ್ತುತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಚೊಚ್ಚಲ ಬಜೆಟ್ ನ್ನು ಮಂಡಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಸ್ಥಿರ, ದಕ್ಷ ಆಡಳಿತದಿಂದ ಸರ್ಕಾರ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೋವಿಡ್-19 ನಿರ್ವಹಣೆಗೊಂಡಿದೆ ಎಂದು ತಿಳಿಸಿದ್ದಾರೆ. * ಒಟ್ಟು ಬಜೆಟ್ ಗಾತ್ರ 2,61,977 ಕೋಟಿ ರೂಪಾಯಿ: - ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ. - ಆರ್ಥಿಕ ಅಭಿವೃದ್ಧಿಗೆ ಉತ್ತೇಜನಗೆ 55,657 ಕೋಟಿ ರೂ. - ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂಪಾಯಿ ಮೀಸಲು. - ರೈತ ಶಕ್ತಿ ನೂತನ ಯೋಜನೆ ಘೋಷಣೆ - 600 ಕೋಟಿ ಅನುದಾನ - ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 68,479 ಕೋಟಿ ರೂ. - ಸಂಸ್ಕೃತಿ ಪರಂಪರೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗೆ 3,102 ಕೋಟಿ ರೂ. - ಮಹಿಳಾ ಸಬಲೀಕರಣ, ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ. ಹಾಗೂ ಮಕ್ಕಳ ಅಭ್ಯುದಯಕ್ಕೆ -40, 944 ಕೋಟಿ ರೂ. - ಆರೋಗ್ಯ, ಶಿಕ್ಷಣ ಮತ್ತು ಕೌಶಾಲ್ಯಭಿವೃದ್ಧಿ -6,329 ಕೋಟಿ ಹೆಚ್ಚುವರಿ ಅನುದಾನ * ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ 438 ನಮ್ಮ ಕ್ಲಿನಿಕ್ಗಳ ಸ್ಥಾಪನೆ, ಹಾಗೂ ಮಹಿಳೆಯರ ಆರೋಗ್ಯಕ್ಕಾಗಿ 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ, ಬೀದರ್, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರು ಈ 4 ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಆರೋಗ್ಯ ವಾಹಿನಿ ಸಂಚಾರಿ ಕ್ಲಿನಿಕ್ ಆರಂಭ. * ಆಯಾ ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳ ಉನ್ನತೀಕರಿಸುವದು : ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ನೋಡಿ ಕಲಿ, ಮಾಡಿ ತಿಳಿ ಯೋಜನೆಯಡಿ ಶಾಲೆಗಳಿಗೆ ಕಿಟ್ ವಿತರಣೆ. ಸುಮಾರು '7' ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ, ಇದರ ಜೊತೆಗೆ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾಗಿ ಉನ್ನತೀಕರಣ ನೂತನ ಮಾದರಿಯಲ್ಲಿ 7 ವಿಶ್ವವಿದ್ಯಾಲಯಗಳ ಸ್ಥಾಪನೆ * ರಸ್ತೆ ಹಾಗೂ ರೈಲು ಮಾರ್ಗ: 2,275 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ ರೂ. ಹಾಗೂ 1,008 ಕಿ.ಮೀ. ರಾಜ್ಯ ಹೆದ್ದಾರಿ ಮರುಡಾಂಬರೀಕರಣಕ್ಕೆ 440 ಕೋಟಿ * ಸಾಗರ ಮಾಲಾ ಯೋಜನೆಯಡಿ 1,880 ಕೋಟಿ ವೆಚ್ಚದಲ್ಲಿ 24 ಬಂದರು ಯೋಜನೆ, ಜೊತೆಗೆ ಕಾರವಾರ ಬಂದರು ವಿಸ್ತರಣೆ, ಕಾರವಾರದಲ್ಲಿ ಮೊದಲ ಜಲ ಸಾರಿಗೆ, ಮೀನುಗಾರಿಕಾ ತರಬೇತಿ ಸಂಸ್ಥೆ ಆರಂಭ. * ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ, ಹಾಗೂ ಕಾಸರಗೋಡು, ತೆಕ್ಕಲಕೋಟೆ, ಗೋವಾ ರಾಜ್ಯದಲ್ಲಿ ಕನ್ನಡ ಭವನ ನಿರ್ಮಾಣ * ಜೀವಿಶಾಸ್ತ್ರ ವ್ಯವಸ್ಥೆಯ ದುಷ್ಪರಿಣಾಮ ತಡೆಯುವ ನಿಟ್ಟಿನಲ್ಲಿ ಮೊದಲ ಬಾರಿ 100 ಕೋಟಿಯ ಗ್ರೀನ್‌ ಬಜೆಟ್ ಮಂಡನೆ * ಕೃಷಿ : ಡ್ರೋನ್‌ ಸರ್ವೆ ಯೋಜನೆಗೆ 287 ಕೋಟಿ ರೂ. ಅನುದಾನ. - ಮುಜರಾಯಿ ಇಲಾಖೆಯ ಅಡಿಯಲ್ಲಿ ದೇವಾಲಯಗಳ ಅಭಿವೃದ್ಧಿಗೆ 158 ಕೋಟಿ ರೂ. ಅನುದಾನ. - ಅಗ್ನಿ ಶಾಮಕ ಸಿಬ್ಬಂದಿಯ ವಿಮಾ ಮೊತ್ತ 1 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ. - ಕಲಬುರ್ಗಿ ಮತ್ತು ವಿಜಯಪುರದಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ - ನವಲಗುಂದ ಮತ್ತು ರಾಣೆಬೆನ್ನೂರಿನಲ್ಲಿ ಜವಳಿಪಾರ್ಕ್‌ ಸ್ಥಾಪನೆ - ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್‌ ಸ್ಥಾಪನೆಗೆ 20 ಕೋಟಿ ರೂ. ಅನುದಾನ - ಬೆಳಗಾವಿಯಲ್ಲಿ ಗ್ಲೋಬಲ್‌ ಎಮರ್ಜಿಂಗ್‌ ಟೆಕ್ನಾಲಜಿ ಸೆಂಟರ್‌ ಗೆ 150 ಕೋಟಿ ರೂ. ಅನುದಾನ - ಮೈಸೂರಿನಲ್ಲಿ ದಿ ಗ್ಲೋಬಲ್‌ ಟೆಕ್ನಾಲಜಿ ಸೆಂಟರ್‌ -ಪ್ಲಗ್‌ & ಪ್ಲೇ ಗೆ 30 ಕೋಟಿ ರೂ. ಅನುದಾನ - ಸ್ವಸಹಾಯ ಸಂಘಗಳಿಗೆ 500 ಕೋಟಿ ರೂ. ಅನುದಾನ. - ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್‌ ಗೆ ಸ್ಥಾಪನೆ.