Job Description: * ಇತ್ತೀಚಿಗೆ ಭಾರತೀಯ ರೈಲ್ವೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ 'ಕವಚ್' ಎಂಬ ಸ್ವಯಂಚಾಲಿತ ರೈಲು ರಕ್ಷಣೆ ಸಿಸ್ಟಮ್ ನ್ನು ಪರೀಕ್ಷಿಸಲಾಗಿದೆ. ಪ್ರಸ್ತುತ ಒಂದೇ ಹಳಿಯಲ್ಲಿ 2 ರೈಲುಗಳು ಎದುರಾದರೂ ಯಾವುದೇ ರೀತಿಯ ಅಪಘಾತ ಸಂಭವಿಸುವದಿಲ್ಲ ಎಂದು ತಿಳಿದು ಬಂದಿದೆ. * ಪ್ರಸ್ತುತ 'ಕವಚ್' ಎಂಬ ಈ ರಕ್ಷಣೆ ಸಿಸ್ಟಮ್ ಭಾರತದಲ್ಲೇ ನಿರ್ಮಾಣವಾಗಿದೆ. ಈ ಕವಚ್ ಎಂಬ ರಕ್ಷಣೆ ಸಿಸ್ಟಮ್ ಪರೀಕ್ಷೆಯ ವೇಳೆಯಲ್ಲಿ ಒಂದು ರೈಲಿನಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಅವರಿದ್ದರು ಆ ಎರಡು ರೈಲುಗಳು ಎದುರಾದರು ಡಿಕ್ಕಿಯಾಗಲಿಲ್ಲ ಹಾಗೂ ಯಾವುದೇ ರೀತಿಯ ಅಪಘಾತ ಸಂಭವಿಸಲಿಲ್ಲ ಎಂದಿದ್ದಾರೆ ಹಾಗೂ ಇದಕ್ಕೆ ಕಾರಣ ರಕ್ಷಣೆ ಸಿಸ್ಟಮ್ ಆಗಿರುವ ಕವಚ ಎಂದಿದ್ದಾರೆ. * ಇದೀಗ ರೈಲ್ವೆ ಇಲಾಖೆಯು ಶೂನ್ಯ ಅಪಘಾತಗಳ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಕವಚ ಎಂಬ ರಕ್ಷಣಾ ಸಿಸ್ಟಮ್ 'ನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ, ಇತ್ತೀಚಿಗೆ ಸಿಕಂದರಾಬಾದ್'ನಲ್ಲಿ ಈ ಸ್ವಯಂಚಾಲಿತ ರೈಲು ರಕ್ಷಣೆ ವ್ಯವಸ್ಥೆಯ ನೈಜ ಸಮಯದಲ್ಲಿ ಪರೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಟ್ವಿಟ್ಟರ್ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ. * ಈ 'ಕವಚ್' ಎಂಬ ರಕ್ಷಣಾ ಸಿಸ್ಟಮ್ ಒಂದು ನಿರ್ದಿಷ್ಟ ದೂರದಲ್ಲಿ ಅದೇ ಮಾರ್ಗದಲ್ಲಿ ಮತ್ತೊಂದು ರೈಲ ಬರುವದನ್ನು ಗಮನಿಸಿದಾಗ ಸದ್ಯ ಚಲಿಸುತ್ತಿರುವ ರೈಲನ್ನು ಸ್ವಯಂಚಾಲಿತವಾಗಿ ನಿಲುಗಡೆಗೆ ತರಲು ಈ ಕವಚ ಸಿಸ್ಟಮ್'ನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಈ ರಕ್ಷಣಾ ಕವಚವನ್ನು ರೈಲಿನಲ್ಲಿ ಬಳಕೆ ಮಾಡುವದರಿಂದ ರೈಲುಗಳು ಡಿಕ್ಕಿಯಾಗುವುದಿಲ್ಲ, ಇದು GPS, ರೇಡಿಯೋ ಫ್ರೀಕ್ವೆನ್ಸಿಗಳಂತಹ ವ್ಯವಸ್ಥೆಗಳಲ್ಲಿ ಇದು ತನ್ನ ತಂತ್ರಜ್ಞಾನದ ಕಾರ್ಯವನ್ನು ನಿರ್ವಹಿಸುತ್ತದೆ. * ಕವಚ್ ಎಂಬ ರಕ್ಷಣಾ ಸಿಸ್ಟಮ್ ಅತ್ಯಂತ ಸುರಕ್ಷಿತ ಸಿಸ್ಟಮ್ ಎಂದಿದ್ದಾರೆ, ಇದು ಸೇಫ್ಟಿ ಇಂಟೆಗ್ರೆಟಿ ಲೆವೆಲ್ 4ರ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆದಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ. ಪ್ರಸ್ತುತ ಈ ವ್ಯವಸ್ಥೆಯ ಬಳಕೆ ಮಾಡುವದರಿಂದ ರೈಲು ರೆಡ್ ಸಿಗ್ನಲ್ ದಾಟಿದ ತಕ್ಷಣವೇ ಸ್ವಯಂಚಾಲಿತವಾಗಿ ರೈಲಿಗೆ ಬ್ರೇಕ್ ಹಾಕಲು ಸಹಾಯ ಮಾಡುತ್ತದೆ ಈ ಹಿನ್ನಲೆಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ರೈಲುಗಳು ಸ್ವಯಂಚಾಲಿತವಾಗಿ ನಿಲ್ಲುತ್ತವೆ. * ಪ್ರಸ್ತುತ ರಕ್ಷಾಕವಚದಲ್ಲಿರುವ RFID ಸಾಧನಗಳನ್ನು ರೈಲು ಎಂಜಿನ್, ಸಿಗ್ನಲ್ ವ್ಯವಸ್ಥೆ, ರೈಲು ನಿಲ್ದಾಣದ ಒಳಗಡೆ ಅಳವಡಿಸಲಾಗುತ್ತದೆ ಎಂದಿದ್ದಾರೆ. * 2022 ರ ಕೇಂದ್ರ ಬಜೆಟ್‌ನಲ್ಲಿ ಭಾರತದ ಉಪಕ್ರಮ ಆತ್ಮನಿರ್ಭರ್ ಭಾಗವಾಗಿ ಘೋಷಣೆ ಯಾಗಿರುವ, 2022-23 ರಲ್ಲಿ ಸುರಕ್ಷತೆ ಹಾಗೂ ಸಾಮರ್ಥ್ಯ ವರ್ಧನೆಗಾಗಿ ಸರಿ ಸುಮಾರು 2,000 ಕಿಮೀ ರೈಲು ಮಾರ್ಗವನ್ನು ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನ 'ಕವಚ್'ದ ಅಡಿಯಲ್ಲಿ ತರಲಾಗುತ್ತದೆ ಎಂದಿದ್ದಾರೆ. * ಪ್ರಸ್ತುತ ಗಂಟೆಗೆ 160 ಕಿ.ಮೀ. ವೇಗವನ್ನು ಹೆಚ್ಚಿಸುವ ಮಿಷನ್ ರಾಫ್ತಾರ್ ಯೋಜನೆಯ ಅಡಿಯಲ್ಲಿ ದೆಹಲಿ-ಮುಂಬೈ ಹಾಗೂ ದೆಹಲಿ ಹೌರಾ ಕಾರಿಡಾರ್‌ಗಳಲ್ಲಿ ಕವಚವನ್ನು ಅಳವಡಿಸಲು ನಿಯೋಜಿಸಲಾಗಿದೆ.