Job Description: * ಇತ್ತೀಚಿಗೆ ಕೇಂದ್ರ ಸರ್ಕಾರವು BSF ಹಾಗೂ CRPF ಒಳಗೊಂಡಂತೆ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಐಟಿ(IT) ಮೂಲಸೌಕರ್ಯಗಳ ಸುಧಾರಿಸುವ ಸಲುವಾಗಿ ಸುಮಾರು 1,523 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಿದೆ. * CAPF ಗಳ ಆಧುನೀಕರಣ ಯೋಜನೆ-4 ರ ಅನುಷ್ಠಾನದ ಯೋಜನೆಯ ಅಡಿಯಲ್ಲಿ ಈ ಮೂರೂ ಪಡೆಗಳು ಒಟ್ಟಾರೆ ಕಾರ್ಯಕ್ಷಮತೆ ಮತ್ತು ಯುದ್ಧಸನ್ನದ್ಧತೆಯನ್ನು ಸುಧಾರಿಸಿಕೊಳ್ಳಲಿವೆ. ಈ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿ ಯೋಜನೆಯಿಂದ ದೇಶದ ಆಂತರಿಕ ಭದ್ರತೆಗೆ ಬಲ ಹೆಚ್ಚಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ವರದಿ ಮಾಡಿದೆ. * ಮುಂದಿನ 2026 ರ ಮಾರ್ಚ್‌ 31 ರ ವರೆಗೆ ಪ್ರಸ್ತುತ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿ ಯೋಜನೆಯ ಇರಲಿದೆ. ಈ ಮೂರೂ ಪಡೆಗಳನ್ನು ನಿಯೋಜಿಸುವ ಪ್ರದೇಶದ ಅವಶ್ಯಕತೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ಖರೀದಿಗೆ ಈ ಯೋಜನೆಯು ಹೆಚ್ಚು ಒತ್ತು ನೀಡಲಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಪಡೆಗಳಿಗೆ ಅಗತ್ಯವಿರುವ ಸಂಬಂಧಿಸಿದ ಐಟಿ(IT) ಮೂಲಸೌಕರ್ಯಗಳನ್ನು ಮತ್ತಷ್ಟು ಸುಧಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿ ಯೋಜನೆಯಿಂದಾಗಿ ಅಂತರರಾಷ್ಟ್ರೀಯ ಗಡಿ, ನಿಯಂತ್ರಣ ರೇಖೆ (LOC), ವಾಸ್ತವ ನಿಯಂತ್ರಣ ರೇಖೆ (LAC)ಯ ಸಮೀಪದಲ್ಲಿರುವ ಎಡಪಂಥೀಯ ಉಗ್ರವಾದಿತ ಪ್ರದೇಶಗಳಾಗಿರುವ, ಜಮ್ಮು-ಕಾಶ್ಮೀರ, ಲಡಾಖ್‌ನಲ್ಲಿನ ಸಂಘರ್ಷಕ್ಕೆ ತುತ್ತಾಗಿರುವ ಹಾಗೂ ಬಂಡುಕೋರರಿಂದ ಅಪಾರ ನಷ್ಟ ಕಷ್ಟ ಅನುಭವಿಸಿರುವ ಈಶಾನ್ಯ ರಾಜ್ಯಗಳಲ್ಲಿ ಸದ್ಯ ಎದುರಾಗುವ ಸವಾಲುಗಳ ವಿರುದ್ಧವಾಗಿ ಹೋರಾಡಲು ಕೇಂದ್ರ ಸರ್ಕಾರದ ಈ ಯೋಜನೆ ಈ ಭಾರತೀಯ ಮೂರೂ ಪಡೆಗಳಿಗೆ ಹೆಚ್ಚಿನ ಬಲವನ್ನು ನೀಡಲಿದೆ ಎಂದಿದ್ದಾರೆ. * ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಭಾರತದ '7' ಕೇಂದ್ರೀಯ ಸಶಸ್ತ್ರ ಪೊಲೀಸ್ ಸಂಸ್ಥೆಗಳ ಏಕರೂಪದ ನಾಮಕರಣವಾಗಿದೆ. ಅವುಗಳು ಪ್ರಮುಖವಾಗಿ ಬೆದರಿಕೆಗಳ ವಿರುದ್ಧ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಹೊರಡುತ್ತವೆ. * ಆ '7' ಭದ್ರತಾ ಪಡೆಗಳು BSF, CRPF, CISF, ITBP, SSB, NSG ಹಾಗೂ ವಿಶೇಷ ರಕ್ಷಣೆ ಗುಂಪು (SPG) ಈ ಎಲ್ಲ ಪಡೆಗಳು ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಿಗೆ(CAPF)ವ್ಯಾಪ್ತಿಗೆ ಬರಲಿವೆ ಈ ಯೋಜನೆಯಿಂದಾಗಿ ಈ ಎಲ್ಲ ಪಡೆಗಳ ಬಲವು ಹೆಚ್ಚಲಿದೆ.