Job Description: * ಚೆನ್ನೈನ MA ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ನಡುವಿನ ಏಕೈಕ ಟೆಸ್ಟ್‌ನ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಹಿಳೆಯರು 10 ವಿಕೆಟ್ ಗಳನ್ನೂ ಪಡೆಯುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ.* ಭಾರತ ತಂಡಕ್ಕೆ ಜುಲೈ 01 ರಂದು (ಸೋಮವಾರ) 37 ರನ್‌ಗಳ ಗೆಲುವಿನ ಗುರಿಯೊಡ್ಡಿತು. ಇದನ್ನು ಆತಿಥೇಯ ಬಳಗವು 9.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ನಿರಾಯಾಸವಾಗಿ ಮುಟ್ಟಿತು. ಶುಭಾ ಸತೀಶ್ (ಔಟಾಗದೆ 13) ಮತ್ತು ಶಫಾಲಿ ವರ್ಮಾ (ಔಟಾಗದೆ 24) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.* ದಕ್ಷಿಣ ಆಫ್ರಿಕಾದ ವಿರುದ್ಧ 603 ರನ್‌ಗಳನ್ನು ಕಲೆ ಹಾಕುವ ಮೂಲಕ ಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. * ಟಿಸ್ಟ್ ಪಂದ್ಯದ ಮೊದಲ ದಿನವೇ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ವನಿತೆಯರು ಈ ಸಾಧನೆ ಮಾಡಿದ್ದಾರೆ.* 2024 ರಲ್ಲಿ ಪರ್ತ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 51 ರನ್‌ಗಳಿಸಿ ಈ ದಾಖಲೆ ಬರೆದಿತ್ತು. * ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಸ್ನೇಹಾ ರಾಣಾ ಅವರು 10 ವಿಕೆಟ್‌ಗಳ ಸಾಧನೆಯನ್ನು ಮಾಡಿದರು. ಪ್ರಥಮ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಕಿತ್ತಿದ್ದ ಅವರುಮ ದ್ವಿತೀಯ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು. * ಜೂಲನ್‌ ಗೋಸ್ವಾಮಿ ಬಳಿಕ ಮಹಿಳಾ ಟೆಸ್ಟ್‌ ಪಂದ್ಯದಲ್ಲಿ 10 ವಿಕೆಟ್‌ ಸಾಧನೆ ಮಾಡಿದ ಭಾರತ ಎರಡನೇ ಬೌಲರ್‌ ಎನಿಸಿಕೊಂಡರು. ದ್ವಿತೀಯ ಇನಿಂಗ್ಸ್‌ನಲ್ಲಿ ರಾಣಾ ಜೊತೆಗೆ ದೀಪ್ತಿ ಶರ್ಮಾ ಮತ್ತು ರಾಜೇಶ್ವರಿ ಗಾಯಕ್ವಾಡ್‌ ಅವರು ತಲಾ ಎರಡು ವಿಕೆಟ್‌ಗಳನ್ನು ಪಡೆದರು. * 38 ರನ್‌ ಗುರಿ ಹಿಂಬಾಲಿಸಿದ್ದ ಭಾರತ ತಂಡದ ಪರ ಶಫಾಲಿ ವರ್ಮಾ ಹಾಗೂ ಶುಭ ಸತೀಶ್‌ ಇನಿಂಗ್ಸ್ ಆರಂಭಿಸಿದ್ದು, ಶಫಾಲಿ ವರ್ಮಾ (205) ದ್ವಿಶತಕ ಬಾರಿಸಿದ್ದರು ಹಾಗೂ ಸ್ಮೃತಿ ಮಂಧಾನಾ 149 ರನ್‌ಗಳನ್ನು ಕಲೆ ಹಾಕಿದ್ದರು.- ಮೊದಲ ಇನಿಂಗ್ಸ್ : ಭಾರತ 115.1 ಓವರ್‌ಗಳಲ್ಲಿ 6ಕ್ಕೆ603. ದಕ್ಷಿಣ ಆಫ್ರಿಕಾ: 84.3 ಓವರ್‌ಗಳಲ್ಲಿ 266. - ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ (ಫಾಲೋ ಆನ್): 154.4 ಓವರ್ ಗಳಲ್ಲಿ373 (ಲೌರಾ ವೋಲ್ಟಾರ್ಟ್ 122, ನದೈನ್ ಡಿ ಕ್ಲರ್ಕ್ 61, ಸಿನಾಲೊ ಜಫ್ತಾ 15, ಸ್ನೇಹಾ ರಾಣಾ 111ಕ್ಕೆ2, ದೀಪ್ತಿ ಶರ್ಮಾ 95ಕ್ಕೆ2, ರಾಜೇಶ್ವರಿ ಗಾಯಕವಾಡ 55ಕ್ಕೆ2) - ಭಾರತ: 9.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 37(ಶುಭಾ ಸತೀಶ್ ಔಟಾಗದೆ 13, ಶಫಾಲಿ ವರ್ಮಾ ಔಟಾಗದೆ 24) ಫಲಿತಾಂಶ: ಭಾರತ ತಂಡಕ್ಕೆ 10 ವಿಕೆಟ್‌ಗಳ ಜಯ.