* ಐಪಿಎಲ್ ಟೂರ್ನಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನೂತನ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಅವರನ್ನು  ನೇಮಕ ಮಾಡಲಾಗಿದೆ.* ಆರ್ಸಿಬಿಯ ಮಾಜಿ ಆಟಗಾರ ದಿನೇಶ್ ಕಾರ್ತಿಕ್ಗೆ ತಂಡ ದೊಡ್ಡ ಹೊಣೆ ನೀಡಿದೆ. ಮುಂದಿನ ಐಪಿಎಲ್ನಲ್ಲಿ ಅವರು ಆರ್ಸಿಬಿಯ ಆಟಗಾರನ ಬದಲಿಗೆ ಕೋಚ್ ಆಗಿ ಕೆಲಸ ನಿರ್ವಹಣೆ ಮಾಡಲಿದ್ದಾರೆ. * ಬೆಂಗಳೂರು ಪರವಾಗಿ 2015ರ ಸೀಸನ್ ಆಡಿದ್ದ ಕಾರ್ತಿಕ್ ಬಳಿಕ ಕೋಲ್ಕತ್ತಾಗೆ ಮರಳಿದ್ದರು. ನಂತರ 2022ರಲ್ಲಿ ಬೆಂಗಳೂರು ತಂಡ ಸೇರಿ 2024ರಲ್ಲಿ ಫ್ರಾಂಚೈಸಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. * ಕಳೆದ ಆರ್ ಸಿಬಿಯಲ್ಲಿ ಆಡಿದ ದಿನೇಶ ಕಾರ್ತೀಕ ಅವರು 187.36ರ ಸೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಒಟ್ಟು 326 ರನ್‌ಗಳನ್ನು ಕಲೆಹಾಕಿದ್ದರು.* ಐಪಿಎಲ್‌ನಲ್ಲಿ ಕಾರ್ತೀಕ ಅವರು ಒಟ್ಟು 257 ಪಂದ್ಯಗಳನ್ನು ಅಡಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಆರ್‌ಸಿಬಿ ತಂಡಗಳಲ್ಲಿ ಅವರು ಆಡಿದ್ದಾರೆ.* ಭಾರತ ತಂಡದಲ್ಲಿ ಕಾರ್ತೀಕ ಅವರು 94 ಏಕದಿನ ಅಂತರರಾಷ್ಟ್ರೀಯ, 26 ಟೆಸ್ಟ್ ಹಾಗೂ 60 ಟಿ20 ಪಂದ್ಯಗಳನ್ನು ಆಡಿದ್ದಾರೆ.