Job Description: * ಉತ್ತರ ಕೊರಿಯಾವು ಜುಲೈ 1 ರಂದು ಹೊಸ ಎರಡು ಖಂಡಾಂತರ ಕ್ಷಿಪಣಿಗಳ ಪರೀಕ್ಷಾ ಉಡಾವಣೆ ನಡಿಸಿದೆ. * ಜಾಂಗ್ಯೋನ್ ನ ನಗರದಿಂದ ಈಶಾನ್ಯ ದಿಕ್ಕಿಗೆ ಎರಡು ಕ್ಷಿಪಣಿಗನ್ನು ಉಡಾಯಿಸಲಾಗಿದೆ. ಮೊದಲನೇ ಕ್ಷಿಪಣಿ 600 ಕಿ.ಮೀ ದೂರ ಚಲಿಸಿದ್ದು, ಎರಡನೇ ಕ್ಷಿಪಣಿ 120 ಕಿ.ಮೀ ಚಲಿಸಿದೆ ಎಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಆದರೆ ಅವುಗಳು ಎಲ್ಲಿ ಲ್ಯಾಂಡ್ ಆಗಿವೆ ಎಂಬ ಮಾಹಿತಿ ತಿಳಿಸಿಲ್ಲ.* ಎರಡೂ ಕ್ಷಿಪಣಿಗಳು ಸಮುದ್ರಕ್ಕೆ ಬೀಳುವ ಹಾಗೆ ಯೋಜನೆ ಮಾಡಲಾಗಿದ್ದು, ಆದರೆ ಮೊದಲ ಕ್ಷಿಪಣಿ ಮಾತ್ರ ಸಮುದ್ರಕ್ಕೆ ಬಿದ್ದಿದೆ. ಆದರೆ ಎರಡೇ ಕ್ಷಿಪಣಿಯು ಅತಿ ಕಡಿಮೆ ದೂರ ಕ್ರಮಿಸಿದ್ದರಿಂದ ಸಮುದ್ರವನ್ನು ತಲುಪಲು ಸಾಧ್ಯವಾಗಿರುದಿಲ್ಲ. ಈ ಕ್ಷಿಪಣಿ ಉತ್ತರ ಕೊರಿಯಾದ ಉತ್ತರ ಭಾಗಕ್ಕೆ ಪತನವಾಗಿರುವ ಸಾಧ್ಯತೆ ಇದ್ದು, ಯಾವುದೇ ಹಾನಿಯಾಗಿವ ಬಗ್ಗೆ ವರದಿಯಾಗಿಲ್ಲ ಎಂದು ಮಾಧ್ಯಮಗಳು ತಿಳಿಸಿವೆ.