Job Description: * ಹಿರಿಯ ಉದ್ಯಮಿಗಳಾದ ಎಂ.ಜಿ.ರಾಜಗೋಪಾಲ್ ಅವರು ಕರ್ನಾಟಕ ಸಣ್ಣ ಕೈಗಾರಿಗಳ ಸಂಘದ(ಕಾಸಿಯಾ) 2024-25 ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.* ಬಿ.ಆರ್.ಗಣೇಶ್ ರಾವ್ ಉಪಾಧ್ಯಕ್ಷರಾಗಿ, ಸುರೇಶ್ ಎನ್.ಸಾಗರ್ ಗೌರವ ಪ್ರಧಾನ ಕಾರ್ಯದರ್ಶಿಯಾಗಿ, ಬಾಬು ಜೆ. ಎಸ್ ಜಂಟಿ ಕಾರ್ಯದರ್ಶಿಯಾಗಿ(ನಗರ), ಸತೀಶ್ ಎನ್.ಜಂಟಿ ಕಾರ್ಯದರ್ಶಿಯಾಗಿ(ಗ್ರಾಮೀಣ) ಮತ್ತು ಖಜಾಂಚಿಯಾಗಿ ಮಂಜುನಾಥ್ ಎಚ್. ನೇಮಕವಾಗಿದ್ದಾರೆ. ಕಾಸಿಯಾ ಪ್ರಕಟಣೆಯಲ್ಲಿ ನೂತನ ಪದಾಧಿಕಾರಿಗಳ ಅಧಿಕಾರಾವಧಿ ಒಂದು ವರ್ಷ ಇರಲಿದೆ ಎಂದು ತಿಳಿಸಿದೆ.* ರಾಜಗೋಪಾಲ್ ಅವರು ಕಾನೂನು ಮತ್ತು ವಿಜ್ಞಾನ ಪದವಿಧರರಾಗಿದ್ದು, 20 ವರ್ಷಗಳ ಕಾಲ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸಂಸ್ಥೆಯಲ್ಲಿ ಅಕೌಂಟ್ಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡು ಈಗ ಕೈಗಾರಿಕೋದ್ಯಮಿಯಾಗಿದ್ದಾರೆ.