Job Description: ➤ ಪ್ರತಿ ವರ್ಷ ಜುಲೈ 30 ರಂದು ಜಾಗತಿಕವಾಗಿ ‘ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನ’ (World Day Against Trafficking in Persons) ಅನ್ನು ಆಚರಿಸಲಾಗುತ್ತದೆ.2026ರ ಥೀಮ್ (ಧ್ಯೇಯವಾಕ್ಯ)"Trapped Behind the Scam" (ಸ್ಕ್ಯಾಮ್‌ಗಳ/ಸೈಬರ್ ವಂಚನೆಯ ಬಲೆಗೆ ಬಿದ್ದವರು) ➤ 2026ರ ಥೀಮ್: "Trapped Behind the Scam": 2026ರ ವಿಶ್ವ ಮಾನವ ಅಕ್ರಮ ಸಾಗಣೆ ವಿರೋಧಿ ದಿನದ ಪ್ರಮುಖ ಗಮನವು ಸೈಬರ್ ಅಪರಾಧ ಮತ್ತು ಬಲವಂತದ ಅಪರಾಧ ಪ್ರವೃತ್ತಿ (Forced Criminality) ಯ ಮೇಲಿದೆ. ಉದ್ಯೋಗದ ಹೆಸರಲ್ಲಿ ವಂಚನೆ: ಸಂಘಟಿತ ಅಪರಾಧ ಜಾಲಗಳು ವಿದೇಶಗಳಲ್ಲಿ (ವಿಶೇಷವಾಗಿ ಆಗ್ನೇಯ ಏಷ್ಯಾದ ದೇಶಗಳಲ್ಲಿ) ಐಟಿ, ಕಸ್ಟಮರ್ ಕೇರ್ ಅಥವಾ ಮಾರ್ಕೆಟಿಂಗ್ ಉದ್ಯೋಗ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿ ಯುವಕರನ್ನು ಆಕರ್ಷಿಸುತ್ತವೆ. ಸೈಬರ್ ವಂಚನೆಗೆ ಬಳಕೆ: ವಿದೇಶಕ್ಕೆ ತಲುಪಿದ ತಕ್ಷಣ ಸಂತ್ರಸ್ತರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡು, ಅವರನ್ನು ಸೈಬರ್ ಕ್ಯಾಂಪ್‌ಗಳಲ್ಲಿ ಬಂಧಿಸಿ ಇಡಲಾಗುತ್ತದೆ. ನಂತರ ಅವರನ್ನು ಬಲವಂತವಾಗಿ ಆನ್‌ಲೈನ್ ಹೂಡಿಕೆ ವಂಚನೆ, ಕ್ರಿಪ್ಟೋಕರೆನ್ಸಿ ಸ್ಕ್ಯಾಮ್, ರೋಮ್ಯಾನ್ಸ್ ಸ್ಕ್ಯಾಮ್ ಮತ್ತು ಫಿಶಿಂಗ್ ನಂತಹ ಜಾಗತಿಕ ಆನ್‌ಲೈನ್ ವಂಚನೆಗಳನ್ನು ಮಾಡಲು ಪೀಡಿಸಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಕಿರುಕುಳ: ಈ ಸ್ಕ್ಯಾಮ್ ಜಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಸಂತ್ರಸ್ತರ ಮೇಲೆ ಬೆದರಿಕೆ, ಹಿಂಸೆ ಮತ್ತು ಸಾಲದ ಸುಳಿಗೆ (Debt bondage) ಸಿಲುಕಿಸಲಾಗುತ್ತದೆ. ➤ UNODC ವರದಿ ಪ್ರಕಾರ: 2023 ರಲ್ಲಿ ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಸೈಬರ್ ಆಧಾರಿತ ಸ್ಕ್ಯಾಮ್‌ಗಳಿಂದ ಸುಮಾರು 18 ಶತಕೋಟಿ ಯೂಎಸ್ ಡಾಲರ್‌ನಿಂದ 37 ಶತಕೋಟಿ ಯೂಎಸ್ ಡಾಲರ್‌ವರೆಗೆ ಜಾಗತಿಕ ಹಣಕಾಸು ನಷ್ಟ ಸಂಭವಿಸಿದೆ. ➤ 'ಬ್ಲೂ ಹಾರ್ಟ್' ಅಭಿಯಾನ (Blue Heart Campaign): ನೀಲಿ ಹೃದಯ (Blue Heart): ಇದು ಮಾನವ ಅಕ್ರಮ ಸಾಗಣೆ ವಿರುದ್ಧದ ಜಾಗತಿಕ ಹೋರಾಟದ ಅಧಿಕೃತ ಸಂಕೇತವಾಗಿದೆ. ಅರ್ಥ: ಇದು ಸಂತ್ರಸ್ತರ ನೋವು ಮತ್ತು ದುಃಖವನ್ನು ವ್ಯಕ್ತಪಡಿಸುವುದರ ಜೊತೆಗೆ, ಮಾನವರನ್ನು ಮಾರಾಟ ಮಾಡುವ ಅಪರಾಧಿಗಳ "ಕಲ್ಲು ಹೃದಯ"ವನ್ನು (Cold-heartedness) ಪ್ರತಿನಿಧಿಸುತ್ತದೆ. ಧ್ಯೇಯ: 'Blue Heart Campaign' ಮೂಲಕ UNODC ಜಾಗತಿಕವಾಗಿ ಜಾಗೃತಿ ಮೂಡಿಸುತ್ತದೆ ಮತ್ತು #EndHumanTrafficking ಹ್ಯಾಶ್‌ಟ್ಯಾಗ್ ಬಳಸಿ ಸಂತ್ರಸ್ತರಿಗೆ ಬೆಂಬಲ ಸೂಚಿಸಲು ಕರೆ ನೀಡುತ್ತದೆ.