➤ ಅಂತರರಾಷ್ಟ್ರೀಯ ನೌಕಾಪಡೆ ಹಾಗೂ ಕಡಲ ವಲಯದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಬಿಮ್ಕೋ-ಐಸಿಎಸ್ (BIMCO-ICS) ಬಿಡುಗಡೆ ಮಾಡಿರುವ 'ಸೀಫೇರರ್ ವರ್ಕ್‌ಫೋರ್ಸ್ ರಿಪೋರ್ಟ್ 2026' ವರದಿಯ ಪ್ರಕಾರ, ವಿಶ್ವದಾದ್ಯಂತ ನಾವಿಕರನ್ನು (Seafarers) ಪೂರೈಸುವ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೇರಿದೆ. 2015 ರಲ್ಲಿ 5ನೇ ಸ್ಥಾನದಲ್ಲಿದ್ದ ಭಾರತ, ಕೇವಲ ಒಂದು ದಶಕದಲ್ಲಿ ಈ ಅಭೂತಪೂರ್ವ ಪ್ರಗತಿ ಸಾಧಿಸಿದೆ. 
➤ ಪ್ರಮುಖ ಅಂಶಗಳು ಹಾಗೂ ಅಂಕಿ-ಅಂಶಗಳು:
  • ಜಾಗತಿಕ ಪಾಲು: ಪ್ರಸ್ತುತ ವಿಶ್ವದ ಒಟ್ಟು ನಾವಿಕರ ಪಡೆಯಲ್ಲಿ ಭಾರತೀಯ ನಾವಿಕರ ಪಾಲು 12.16% ಆಗಿದೆ.
  • ಒಟ್ಟು ನಾವಿಕರ ಸಂಖ್ಯೆ: ಭಾರತದಿಂದ ಪ್ರಸ್ತುತ 3,11,936 ಸಕ್ರಿಯ ಕಡಲ ವೃತ್ತಿಪರರು (Maritime Professionals) ಅಂತರರಾಷ್ಟ್ರೀಯ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
  • ವಿಶ್ವ ಶ್ರೇಯಾಂಕ (Global Ranking):
    1. ಫಿಲಿಪೈನ್ಸ್ (ಪ್ರಥಮ ಸ್ಥಾನ)
    2. ಭಾರತ (ದ್ವಿತೀಯ ಸ್ಥಾನ)
    3. ಚೀನಾ, ರಷ್ಯಾ ಮತ್ತು ಇಂಡೋನೇಷ್ಯಾ (ನಂತರದ ಸ್ಥಾನಗಳಲ್ಲಿವೆ)
➤ ಭಾರತೀಯ ನಾವಿಕರ ವಿಭಾಗೀಯ ವಿಶ್ಲೇಷಣೆ
1. 
ಹಡಗು ಆಫೀಸರ್‌ಗಳು (Ship Officers): ಭಾರತವು ಪ್ರಸ್ತುತ 1,40,718 ಹಡಗು ಆಫೀಸರ್‌ಗಳನ್ನು ಜಾಗತಿಕ ಕಡಲ ವಲಯಕ್ಕೆ ಒದಗಿಸುತ್ತಿದ್ದು, ಇದು ವಿಶ್ವದ ಒಟ್ಟು ಆಫೀಸರ್‌ಗಳ ಪಡೆಯಲ್ಲಿ 13.41% ಪಾಲನ್ನು ಹೊಂದಿದೆ. ಈ ವಿಭಾಗದ ಸಿಬ್ಬಂದಿಯು ಮುಖ್ಯವಾಗಿ ನೌಕೆಯ ನಾಯಕತ್ವ, ನ್ಯಾವಿಗೇಷನ್ (ಮಾರ್ಗಸೂಚಿ) ಹಾಗೂ ಇಂಜಿನಿಯರಿಂಗ್ ನಿರ್ವಹಣೆಯ ಜವಾಬ್ದಾರಿಯನ್ನು ಹೊರಟಿರುತ್ತಾರೆ.
2. ರೇಟಿಂಗ್ಸ್‌ಗಳು (Ratings): ಹಡಗಿನ ಕಾರ್ಯಚರಣೆ, ತಾಂತ್ರಿಕ ಬೆಂಬಲ ಹಾಗೂ ದೈನಂದಿನ ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವ ರೇಟಿಂಗ್ಸ್ ವಿಭಾಗದಲ್ಲಿ ಭಾರತದಿಂದ 1,71,218 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಜಾಗತಿಕ ರೇಟಿಂಗ್ಸ್ ಪಡೆಯಲ್ಲಿ 11.29% ಪಾಲಾಗಿದೆ.
3. ಒಟ್ಟು ಕೊಡುಗೆ (Total Workforce): ಆಫೀಸರ್‌ಗಳು ಮತ್ತು ರೇಟಿಂಗ್ಸ್‌ಗಳು ಎರಡನ್ನೂ ಸೇರಿ ಭಾರತವು ಒಟ್ಟಾರೆಯಾಗಿ 3,11,936 ಸಕ್ರಿಯ ಕಡಲ ವೃತ್ತಿಪರರನ್ನು (Seafarers) ಅಂತರರಾಷ್ಟ್ರೀಯ ಹಡಗು ಉದ್ಯಮಕ್ಕೆ ಒದಗಿಸುತ್ತಿದ್ದು, ವಿಶ್ವದ ಒಟ್ಟು ನಾವಿಕರ ಪಡೆಯಲ್ಲಿ ಭಾರತದ ಒಟ್ಟು ಪಾಲು 12.16% ಆಗಿದೆ.
➤ ಈ ಬೆಳವಣಿಗೆಗೆ ಕಾರಣವಾದ ಸರ್ಕಾರಿ ಕ್ರಮಗಳು:
  1. ಮಿಷನ್ 20% (Mission 20%):
    • ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಜಾಗತಿಕ ನಾವಿಕರ ಪಡೆಯಲ್ಲಿ ಭಾರತದ ಪಾಲನ್ನು 12.16% ರಿಂದ 20% ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.
    • ಧ್ಯೇಯ: ವಿಶ್ವದ ಪ್ರತಿಯೊಬ್ಬ 5 ನಾವಿಕರಲ್ಲಿ ಒಬ್ಬ ನಾವಿಕ ಭಾರತೀಯನಾಗಿರಬೇಕು.
  2. ಕಡಲ ಕಾನೂನುಗಳ ಸುಧಾರಣೆ (Legislative Overhaul): ಕಡಲ ವಲಯವನ್ನು ಆಧುನೀಕರಿಸಲು ಕೇಂದ್ರ ಸರ್ಕಾರ ಪ್ರಮುಖ ಶಾಸನಗಳನ್ನು ತಂದಿದೆ:
    • ಮರ್ಚೆಂಟ್ ಶಿಪಿಂಗ್ ಕಾಯ್ದೆ, 2025 (Merchant Shipping Act, 2025)
    • ಭಾರತೀಯ ಬಂದರುಗಳ ಕಾಯ್ದೆ, 2025 (Indian Ports Act, 2025)
    • ಕರಾವಳಿ ಹಡಗು ಕಾಯ್ದೆ, 2025 (Coastal Shipping Act, 2025)
    • ಒಳನಾಡಿನ ನೌಕೆಗಳ ಕಾಯ್ದೆ, 2021 (Inland Vessels Act, 2021)
  3. ಮಹಿಳಾ ನಾವಿಕರ ಭಾಗವಹಿಸುವಿಕೆ ಹೆಚ್ಚಳ:
    • 2021 ರಲ್ಲಿ ಕೇವಲ 1,600 ರಷ್ಟಿದ್ದ ಮಹಿಳಾ ನಾವಿಕರ ಸಂಖ್ಯೆ, 2025 ರ ವೇಳೆಗೆ 7,000 ಕ್ಕೂ ಹೆಚ್ಚು ಸಕ್ರಿಯ ಮಹಿಳಾ ನಾವಿಕರಿಗೆ ಏರಿಕೆಯಾಗಿದೆ.
  4. ಡಿಜಿಟಲೀಕರಣ ಹಾಗೂ ತರಬೇತಿ:
    • ಡೈರೆಕ್ಟರೇಟ್ ಜನರಲ್ ಆಫ್ ಶಿಪಿಂಗ್ (DGS) ಮೂಲಕ ಆನ್‌ಲೈನ್ ಪ್ರಮಾಣೀಕರಣ ಮತ್ತು ತರಬೇತಿ ಸಂಸ್ಥೆಗಳ ಸಾಮರ್ಥ್ಯ ವೃದ್ಧಿ.
➤ ವಿಶ್ವದ ಅತಿ ದೊಡ್ಡ ನಾವಿಕರ ಪೂರೈಕೆದಾರ ದೇಶ: ಫಿಲಿಪೈನ್ಸ್