* ಭಾರತವು ತನ್ನ ಭೂ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರಾಣಿ ಪ್ರಭೇದಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಮೂಲಕ ಸಂಪೂರ್ಣ ಪ್ರಾಣಿ ಪ್ರಭೇದಗಳ ಪಟ್ಟಿನ್ನು ಮಾಡಿದ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿದೆ. ಈ ಪಟ್ಟಿಯು 1,04,561 ಜಾತಿಗಳನ್ನು ಒಳಗೊಂಡಿದೆ. * 'ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ'ದ 109ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಪ್ರಾಣಿ ಪ್ರಭೇದಗಳ ಸರ್ವೇಕ್ಷಣೆ ಕುರಿತ ಪೋರ್ಟಲ್‌ಗೆ ಚಾಲನೆ ನೀಡಿ ಈ ವಿಷಯ ಪ್ರಕಟಿಸಿದರು. * ದಾಖಲೆಯು ಜೀವ ವೈವಿಧ್ಯತೆ ಮಾಹಿತಿ ದಾಖಲೀಕರಣದಲ್ಲಿ ದೇಶವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿ ನಿಲ್ಲಿಸಿದೆ. ಈ ದಾಖಲಾತಿಯು ಪ್ರಾಣಿಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ನೀತಿ ನಿರೂಪಕರಿಗೆ ಅಮೂಲ್ಯ ಜ್ಞಾನಭಂಡಾರವಾಗಿ ನೆರವಿಗೆ ಬರಲಿದೆ'' ಎಂದು ಸಚಿವರು ತಿಳಿಸಿದ್ದಾರೆ.