Job Description: * 2022ರ ಭಾರತೀಯ ನ್ಯಾಯಾಂಗ ವರದಿ ಬಿಡುಗಡೆಯಾಗಿದ್ದು ನ್ಯಾಯದಾನದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ತಮಿಳುನಾಡು, ತೆಲಂಗಾಣ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ. ದೇಶಾದ್ಯಂತ ಸಾರ್ವಜನಿಕರಿಗೆ ನ್ಯಾಯದಾನ ಒದಗಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ಅಗ್ರಸ್ಥಾನದಲ್ಲಿದ್ದು, ಐದು ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿವೆ ಎಂದು ಇಂಡಿಯಾ ಜಸ್ಟಿಸ್ ರಿಪೋರ್ಟ್ (ಐಜೆಆರ್) 2022 ರಲ್ಲಿ ತಿಳಿಸಿದೆ.* ಪೊಲೀಸ್‌ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಜೈಲುಗಳ ಸ್ಥಿತಿಗತಿ ಹಾಗೂ ಕಕ್ಷಿದಾರರಿಗೆ ಕಾನೂನು ಸವಲತ್ತು- ಈ ಮಾನದಂಡಗಳನ್ನು ಇರಿಸಿಕೊಂಡು ವರದಿ ಸಿದ್ಧಪಡಿಸಲಾಗಿದೆ. 2019ರಲ್ಲಿ ಪ್ರಾರಂಭವಾದ ಟಾಟಾ ಟ್ರಸ್ಟ್‌ಗಳ ಉಪಕ್ರಮವಾದ ಐಜೆಆರ್‌ ಈ ವರದಿಯ ಕರ್ತೃವಾಗಿದೆ.* ಇಂಡಿಯಾ ಜಸ್ಟಿಸ್ ರಿಪೋರ್ಟ್ 2019 ರಲ್ಲಿ ಟಾಟಾ ಟ್ರಸ್ಟ್ ಪ್ರಾರಂಭಿಸಿದ ಉಪಕ್ರಮವಾಗಿದೆ, 2022 ರ ಡಿಸೆಂಬರ್ ವರೆಗೆ ದೇಶದ 10 ಲಕ್ಷ ಜನರಿಗೆ 19 ನ್ಯಾಯಾಧೀಶರಿದ್ದಾರೆ ಮತ್ತು 1987 ರ ಕಾನೂನು ಆಯೋಗದ ಅಡಿಯಲ್ಲಿ 10 ಲಕ್ಷ ಜನರಿಗೆ 50 ನ್ಯಾಯಾಧೀಶರು ಇರಬೇಕೆಂದೂ ಇಂಡಿಯಾ ಜಸ್ಟಿಸ್ ರಿಪೋರ್ಟ್ ಸಲಹೆ ನೀಡಿತ್ತು.