Job Description: ➤ ಪ್ರತಿ ವರ್ಷ ಜುಲೈ 22 ರಂದು ಜಗತ್ತಿನಾದ್ಯಂತ ವಿಶ್ವ ಮಿದುಳಿನ ದಿನ (World Brain Day) ವನ್ನು ಆಚರಿಸಲಾಗುತ್ತದೆ. ನರಮಂಡಲ ಸಂಬಂಧಿತ ಕಾಯಿಲೆಗಳ (Neurological Disorders) ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಉತ್ತಮ ಮಿದುಳಿನ ಆರೋಗ್ಯವನ್ನು ಉತ್ತೇಜಿಸಲು ಈ ದಿನವನ್ನು ಮೀಸಲಿಡಲಾಗಿದೆ.2026 ರ ಧ್ಯೇಯವಾಕ್ಯ: ಮಿದುಳಿನ ಆರೋಗ್ಯ: ಎಲ್ಲರಿಗೂ ಲಭ್ಯತೆ. (Brain Health: Access for All)➤ ವಿಶ್ವ ನರವಿಜ್ಞಾನ ಒಕ್ಕೂಟವು (WFN) ತನ್ನ ಸ್ಥಾಪನೆಯ ದಿನದ ಸವಿನೆನಪಿಗಾಗಿ, ನರಮಂಡಲ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು 2014 ರ ಜುಲೈ 22 ರಿಂದ ಪ್ರತಿವರ್ಷ ಅಧಿಕೃತವಾಗಿ "ವಿಶ್ವ ಮಿದುಳಿನ ದಿನ"ವನ್ನು ಆಚರಿಸಲು ಪ್ರಾರಂಭಿಸಿತು.➤ ಪ್ರಮುಖ ನರಮಂಡಲ ಸಂಬಂಧಿತ ಕಾಯಿಲೆಗಳು: ಪಾರ್ಶ್ವವಾಯು (Brain Stroke): ಮಿದುಳಿಗೆ ರಕ್ತಪರಿಚಲನೆ ಸ್ಥಗಿತಗೊಳ್ಳುವುದರಿಂದ ಉಂಟಾಗುತ್ತದೆ. ಆಲ್ಝೈಮರ್ಸ್ ಮತ್ತು ಡಿಮೆನ್ಷಿಯಾ (Dementia): ಜ್ಞಾಪಕಶಕ್ತಿ ಹಾಗೂ ಆಲೋಚನಾ ಶಕ್ತಿ ಕುಂದುವಿಕೆ. ಮಿಗ್ರೇನ್ (Migraine): ತೀವ್ರವಾದ ತಲೆನೋವು ಮತ್ತು ನರಗಳ ಅಸ್ವಸ್ಥತೆ. ಮಿರಗಿ ರೋಗ / ಅಪಸ್ಮಾರ (Epilepsy): ಮಿದುಳಿನ ನರಕೋಶಗಳ ವಿದ್ಯುತ್ ಸಂಕೇತಗಳ ಏರುಪೇರಿನಿಂದ ಉಂಟಾಗುವ ರೋಗ. ಪಾರ್ಕಿನ್ಸನ್ ಕಾಯಿಲೆ (Parkinson's Disease): ದೇಹದ ಚಲನೆ ಮತ್ತು ಸಮತೋಲನದ ಮೇಲೆ ಪರಿಣಾಮ ಬೀರುವ ಕಾಯಿಲೆ. ➤ ಮಿದುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಸರಳ ಸಲಹೆಗಳು: ದೈಹಿಕ ಚಟುವಟಿಕೆ: ದಿನನಿತ್ಯದ ವ್ಯಾಯಾಮದಿಂದ ಮಿದುಳಿಗೆ ರಕ್ತಸಂಚಾರ ಹೆಚ್ಚಾಗುತ್ತದೆ. ಸಮತೋಲಿತ ಆಹಾರ: ಹಣ್ಣುಗಳು, ತರಕಾರಿಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲ ಭರಿತ ಆಹಾರ ಸೇವನೆ. ಸಾಕಷ್ಟು ನಿದ್ರೆ: ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಿದುಳಿನ ಪುನಶ್ಚೇತನಕ್ಕೆ ಅಗತ್ಯ. ಮಾನಸಿಕ ತರಬೇತಿ: ಓದುವುದು, ಒಗಟು ಬಿಡಿಸುವುದು ಮತ್ತು ಹೊಸ ವಿಷಯಗಳನ್ನು ಕಲಿಯುವುದು ಮಿದುಳನ್ನು ಚುರುಕಾಗಿಡುತ್ತದೆ. ಒತ್ತಡ ನಿರ್ವಹಣೆ: ಯೋಗ ಮತ್ತು ಧ್ಯಾನದ ಮೂಲಕ ತೀವ್ರ ಒತ್ತಡದಿಂದ ದೂರವಿರುವುದು. ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ